ಬಾಳೆಹಣ್ಣು ಒಂದು ಪೌಷ್ಠಿಕವಾದ ಆಹಾರ ಎನ್ನುವುದರಲ್ಲಿ ನೋ ಡೌಟ್. ಆದರೆ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಇಲ್ಲಿ ನಾವು ಅದರ ಬಗ್ಗೆ ಮಾಹಿತಿ ನೀಡಲಿದ್ದೇವೆ, ಅದಕ್ಕಿಂತ ಮೊದಲು ಬಾಳೆಹಣ್ಣಿನ ಕುರಿತು ಇತರ ಮಾಹಿತಿಗಳನ್ನು ತಿಳಿಯೋಣ. ಬಾಳೆಹಣ್ಣಿನಲ್ಲಿ ಮೆಗ್ನಿಷ್ಯಿಯಂ, ನಾರಿನಂಶ, ಪೊಟಾಷ್ಯಿಯಂ ಇದ್ದು ಇದನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುವುದು. ಬಾಳೆಹಣ್ಣಿನಲ್ಲಿ ಶೇ. 25ರಷ್ಟು ಸಕ್ಕರೆಯಂಶವಿರುತ್ತದೆ ಹಾಗೂ ಇದರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ6 ಇದ್ದು ದೇಹಕ್ಕೆ ಶಕ್ತಿಯನ್ನು ತುಂಬುವುದು. ಬಾಳೆಹಣ್ಣು ತಿಂದರೆ ದೇಹ ತಂಪಾಗಿರುತ್ತದೆ, ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಕ್ತ ಹೀನತೆ ಇರುವವರು ದಿನಾ ಎರಡು ಬಾಳೆಹಣ್ಣು ತಿನ್ನಬೇಕು. ಮೊದಲಿಗೆ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ ಎಂದು ತಿಳಿಯೋಣ.