ಮೃತರಾದವರ ಹೆಸರಿನಲ್ಲಿರುವ ಜಮೀನನ್ನು ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡುವ ಕ್ರಮವನ್ನು ಪೌತಿ ಖಾತೆ ಎಂದು ಕರೆಯುತ್ತಾರೆ. ಮೃತರಾದ ತಮ್ಮ ಹಿರಿಯರ ಹೆಸರಿನಲ್ಲಿ ಜಮೀನು ಇದ್ದರೂ ಅದನ್ನು ಪೌತಿ ಖಾತೆ ಮಾಡಿಕೊಳ್ಳದೆ ಅನೇಕ ಕುಟುಂಬಗಳು ಇಂದಿಗೂ ಸಾಗುವಾಳ ಮಾಡಿಕೊಂಡು ಬರುತ್ತಿವೆ. ಕೆಲ ರೈತರು ಪೌತಿ ಖಾತೆ ಮಾಡಿಸಿಕೊಳ್ಳಲು ಅನೇಕ ದಾಖಲೆಗಳಿಗಾಗಿ ಓಡಾಡಬೇಕಾಗಿರುದರಿಂದ ಅವರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪಿತ್ರಾರ್ಜಿತ ಆಸ್ತಿಯು ಮಕ್ಕಳ ಹೆಸರಿಗೆ ವಿಭಜನೆ ಆಗದೆ, ಇನ್ನೂ ಮೃತ ತಾತ, ತಂದೆ, ತಾಯಿ, ಪತಿಯ ಹೆರಿನಲ್ಲೇ ಇದೆ. ಇದರಿಂದಾಗಿ ಜಮೀನು ಮೃತ ರೈತರ ಹೆಸರಿನಲ್ಲೆ ಇರುವುದರಿಂದ ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಲು ಅವರು ಭೂಮಿ ಮೇಲೆ ಇಲ್ಲ. ಇದರಿಂದಾಗಿ ಸರ್ಕಾರದ ಯೋಜನೆಯ ಲಾಭ ಅವರ ವಾರಸುದಾರರಿಗೆ ಸಿಗುತ್ತಿಲ್ಲ. ಈ ಸವಸ್ಯೆಯನ್ನು ಗಂಭೀರವಾಗಿ ಪರಿಣಿಸಿರುವ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೂ ಸರ್ಕಾರದ ಯೋಜನೆಗಳ ಲಾಭ ದೊರೆಯಬೇಕು ಎಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಪೌತಿಖಾತೆ ಆಂದೋಲನ ಆರಂಬಿಸಲು ಡಿಸಿಗಳಿಗೆ ಸೂಚಿಸಿದೆ. ಕಂದಾಯ ಸಚಿವ ಆರ್ ಅಶೋಕ ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈತರಿಗೆ ಅನುಕೂಲವಾಗುವಂತೆ ಪೌತಿಖಾತೆ ಆಂದೋಲನ ನಡೆಸಬೇಕೆಂದು ತಿಳಿಸಿದ್ದಾರೆ.