ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು(ಸೆ.17)ನಡೆಯಲಿದ್ದು, ನ್ಯಾ. ಎನ್.ವಿ ರಮಣ, ನ್ಯಾ.ಮೋಹನ್ ಶಾಂತನಗೌಡ ಮತ್ತು ನ್ಯಾ.ಅಜಯ್ ರಸ್ತೋಗಿ ಅವರಿರುವ ತ್ರಿಸದಸ್ಯ ಪೀಠ ಈ ಅನರ್ಹ ಶಾಸಕ ಸಲ್ಲಿಸಿರುವ ಒಟ್ಟು 9 ರಿಟ್ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಅನರ್ಹ ಶಾಸಕರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳಿಗೆ ಕೊನೆಗೂ ವಿಚಾರಣೆ ಕಾಲ ಕೂಡಿಬಂದಿದೆ.
Supreme Court Agreed to consider an urgent plea made by several disqualified Karnataka MLA Today(September 17) .