Darshan's Kurukshetra Movie has released today. Sumalatha watched Kurukshetra movie & speaks about Darshan. Sumalatha appreciates Darshan's acting
ಕನ್ನಡ ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿದ್ದ ಕುರುಕ್ಷೇತ್ರ ಇಂದು ರಿಲೀಸ್ ಆಗಿದೆ. ಮಧ್ಯ ರಾತ್ರಿಯಿಂದನೆ ಕುರುಕ್ಷೇತ್ರ ಪ್ರದರ್ಶನವಾಗುತ್ತಿದ್ದು ಅಭಿಮಾನಿಗಳು ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದಾರೆ. ಡಿ ಬಾಸ್ ದುರ್ಯೋದನನ ಅಭಿನಯಕ್ಕೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ. ನಿನ್ನೆ ರಾತ್ರಿ ಏರ್ಪಡಿಸಿದ್ದ ಪ್ರೀಮಿಯರ್ ಶೋನಲ್ಲಿ ನಟಿ ಮತ್ತು ಸಂಸದೆ ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಅನೇಕರು ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿ ಹೊರಬಂದ ಸುಮಲತಾ, ದರ್ಶನ್ ಅಭಿನಯವನ್ನು ಹಾಡಿಹೊಗಳಿದ್ದಾರೆ.