bike got fire when fuel the petrol in Bagalkot
ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕಿಸುವ ವೇಳೆ ಬೈಕ್ ಗೆ ಆಕಸ್ಮಿಕ ಬೆಂಕಿ ತಗುಲಿದ ವಿಡಿಯೊ ಒಂದು ವೈರಲ್ ಆಗಿದೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಪಟವರ್ಧನ ಪೆಟ್ರೋಲ್ ಪಂಪ್ ನಲ್ಲಿ ಘಟನೆ ಸಂಭವಿಸಿದೆ.
ಪಂಪ್‌ನಲ್ಲಿ ಬೈಕ್ ಸವಾರನೊಬ್ಬ ಪೆಟ್ರೋಲ್ ಹಾಕಿಸಿಕೊಳ್ಳಲಿ ಸರದಿ ಸಾಲಿನಲಿ ನಿಂತಿರುತ್ತಾನೆ.
ಆಗ ಬೈಕ್ ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ.ಇದನ್ನು ಕಂಡಿದ್ದೇ ತಡ ಅಲ್ಲಿನ ಸಿಬ್ಬಂದಿಗಳು ಮರಳನ್ನು ಸುರಿದು ಬೆಂಕಿ ನಂದಿಸಿ ಅಪಾಯವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದು ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಸಿಕ್ಕಿದ್ದು ಸದ್ಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೈಕ್ ಸವಾರ ಯಾರೂ ಎಲ್ಲಿಯವ ಎಂದು ತಿಳಿದು ಬಂದಿಲ್ಲ.