Actress Rashmika Mandanna had struggled for this 5 to 10 mins scene. Rashmika Mandanna has practiced cricket for 4 to 5 months. She is playing cricketer role in 'Dear Comrade' movie.
ಸಿನಿಮಾದ ಕೆಲವು ಪಾತ್ರಗಳಿಗಾಗಿ, ಕೆಲವು ದೃಶ್ಯಗಳಿಗಾಗಿ ಕಲಾವಿದರು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಅದೇ ರೀತಿ ನಟಿ ರಶ್ಮಿಕಾ ಮಂದಣ್ಣ ಕೂಡ ತುಂಬ ಕಷ್ಟ ಪಟ್ಟು ಒಂದು ಪಾತ್ರಕ್ಕೆ ಸಿದ್ಧವಾಗಿದ್ದರು. ಅದೇ 'ಡಿಯರ್ ಕಾಮ್ರೇಡ್' ಚಿತ್ರದ ಲಿಲ್ಲಿ ಪಾತ್ರ. ಚಿತ್ರದಲ್ಲಿ ಕ್ರಿಕೆಟ್ ದೃಶ್ಯ ಬರೀ 5 ರಿಂದ 10 ನಿಮಿಷ ಇದೆ. ಆದರೆ, ಆ ದೃಶ್ಯಕ್ಕಾಗಿ ರಶ್ಮಿಕಾ ಸಾಕಷ್ಟು ಶ್ರಮ ಹಾಕಿದ್ದಾರೆ.