ಚುನಾವಣೆ ಫಲಿತಾಂಶದಲ್ಲಿ ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗುತ್ತಿದ್ದಂತೆಯೇ ಮೋದಿ ಅವರ ತವರು ಗುಜರಾತ್‌ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಮೋದಿ ಅವರ ತಾಯಿ ಹೀರಾ ಬೆನ್ ಅವರ ಮುಖದಲ್ಲಿ ಗೆಲುವಿನ ಖುಷಿ ಮೂಡಿತ್ತು. ಮೋದಿ ಅವರ ಮನೆಯಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಭಾರಿ ಗೆಲುವಿನ ಸೂಚನೆ ದೊರಕುತ್ತಿದ್ದಂತೆಯೇ ಸಂಭ್ರಮಿಸಿದರು. ಮನೆಯಿಂದ ನಗುಮೊಗದೊಂದಿಗೆ ಹೊರಕ್ಕೆ ಬಂದ ಮೋದಿ ಅವರ ತಾಯಿ ಹೀರಾ ಬೆನ್ ಕೈ ಮುಗಿದು ದೇಶದ ಜನತೆಗೆ ಧನ್ಯವಾದ ಸಲ್ಲಿಸಿದರು.
Prime Minister Narendra Modi's mother Hiraben thanked the nation for BJP victory.