Lok Sabha Elections 2019: Exit poll results 2019 Karnataka BJP leaders expressed their happiness after survey results shows NDA will gain more seats.
ಚುನಾವಣೋತ್ತರ ಸಮೀಕ್ಷೆಗಳು ವಿರೋಧಪಕ್ಷಗಳಲ್ಲಿ ಹತಾಶೆ ಮೂಡಿಸಿದ್ದರೆ, ಆಡಳಿತಾರೂಢ ಬಿಜೆಪಿ ಮತ್ತೆ ಗೆದ್ದೇಬಿಟ್ಟಿದ್ದೇವೆ ಎಂಬ ಸಂಭ್ರಮದಲ್ಲಿ ಬೀಗುತ್ತಿದೆ. ಎಕ್ಸಿಟ್ ಪೋಲ್‌ಗಳಲ್ಲಿ ಅಂದಾಜಿಸಿರುವ ಅಂಕಿಗಳು ಬಿಜೆಪಿಗೆ ಖುಷಿ ನೀಡಿವೆ. ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದ ಆಡಳಿತಾರೂಢ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ, ಎಕ್ಸಿಟ್ ಪೋಲ್‌ಗಳು ತಲೆಕೆಳಗಾದ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಮೇ 23ರ ಅಂತಿಮ ಫಲಿತಾಂಶ ಬರುವವರೆಗೂ ಕಾಯುವುದು ಅನಿವಾರ್ಯ.