ದೇವೇಗೌಡ್ರು ಹನ್ನೆರಡು ಸೀಟು ಡಿಮಾಂಡ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, ಎಂಟು ಕ್ಷೇತ್ರಕ್ಕೆ ಅವರನ್ನು ಒಪ್ಪಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಶಕ್ತವಾಗಿದೆ. ಇದರಿಂದ ಎದುರಾಗುವ ವಿರೋಧದ ಬಗ್ಗೆಯೂ ಮಾತುಕತೆ ನಡೆದಿದೆ. ತಮಗೆ ಬೇಕಾದ ಎಂಟು ಕ್ಷೇತ್ರಗಳನ್ನು ಆಯ್ಕೆಮಾಡಿಕೊಳ್ಳುವಲ್ಲಿ, ಎಲ್ಲಾ ಸಮೀಕರಣಗಳನ್ನು ಅಳೆದು ತೂಗಿ, ತಮ್ಮೆಲ್ಲಾ ರಾಜಕೀಯ ಅನುಭವವನ್ನು ಒರೆಗಚ್ಚಿ, ದೇವೇಗೌಡ್ರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಆಪ್ತವಲಯದಿಂದ ಕೇಳಿಬರುತ್ತಿರುವ ಮಾಹಿತಿ. ಜೆಡಿಎಸ್ಸಿಗೆ ಬಹುತೇಕ ಅಂತಿಮವಾಗಿದೆ ಎನ್ನಲಾಗುತ್ತಿರುವ ಎಂಟು ಕ್ಷೇತ್ರಗಳು ಇಂತಿವೆ.