ಬಿಗ್ ಬಾಸ್ ಕನ್ನಡ ಸೀಸನ್ 6' ಕಾರ್ಯಕ್ರಮ ಮೂರು ವಾರ ಕಳೆದಿದೆ. ಮೂರನೇ ವಾರ ನೃತ್ಯ ಸಂಯೋಜಕಿ ಸ್ನೇಹಾ ಆಚಾರ್ಯ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸ್ನೇಹ ಆಚಾರ್ಯ. ಒಂದೆರಡು ಜಗಳಗಳಲ್ಲಿ ದನಿ ಏರಿಸಿದ್ದು ಬಿಟ್ಟರೆ, ಸ್ನೇಹಾ ಆಚಾರ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇದ್ದರೂ, ಇಲ್ಲದಂತೆ ಇದ್ದಾಕೆ ಸ್ನೇಹಾ ಆಚಾರ್ಯ. ಇದೀಗ ಸ್ನೇಹಾ ಆಚಾರ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ಮಿಸ್ ಮಾಡದೇ ನೋಡಿ.