Tipu Jayanti 2018 : ಮಂಗಳೂರು ಕ್ರೈಸ್ತರಿಗೆ ಇವತ್ತಿಗೂ ಟಿಪ್ಪು ಸುಲ್ತಾನ್ ಮೇಲೆ ಆಕ್ರೋಶ ಯಾಕೆ?|Oneindia Kannada

2018-11-10 24

Why Mangaluru Christians blood boils for Tipu Sultan? There is an interesting real story behind it. Christian families were saved by Hindus when Tipu Sultan attacked them during 18th century. In that memory every year major churches honor Hindus. Some claim that he is a fanatic, attacker and some claims to be Tipu Sultan as freedom fighter.


ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಕ್ಷಣ ಗಣನೆ ಆರಂಭವಾಗುತ್ತಿದ್ದಂತೆ ರಾಜ್ಯದಾದ್ಯಂತ ಟಿಪ್ಪು ಜಯಂತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ನವೆಂಬರ್ 10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದೆ. ಟಿಪ್ಪು ಸುಲ್ತಾನ್ ವಿರುದ್ಧ ಕೊಡವರಿಗೆ ಹೇಗೆ ಆಕ್ರೋಶವಿದೆಯೋ ಆದೇ ರೀತಿ ಕರಾವಳಿಯ ಕ್ರೈಸ್ತರಿಗೆ ಟಿಪ್ಪು ಸುಲ್ತಾನ್ ಕುರಿತು ವೈರತ್ವವಿದೆ. ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ನಡೆಸಿದ ಕೌರ್ಯ, ದಬ್ಬಾಳಿಕೆ, ದಾಳಿಯನ್ನು ಮಂಗಳೂರಿನ ಕ್ರೈಸ್ತರು ಇಂದಿಗೂ ಮರೆತಿಲ್ಲ. ಮಂಗಳೂರು ಹೊರವಲಯದ ಕಿರೆಂ ರೆಮದಿ ಚರ್ಚ್ ಅಂದು ಟಿಪ್ಪು ಸುಲ್ತಾನ್ ಎಸಗಿದೆ ದಬ್ಬಾಳಿಕೆಗೆ ಸಾಕ್ಷಿಯಾಗಿ ದೌರ್ಜನ್ಯದ ಕತೆಯನ್ನು ಹೇಳುತ್ತದೆ.