ಭಾರಿ ಜಿದ್ದಾ-ಜಿದ್ದಿನ ಕಣವಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿಯು ಭಾರಿ ಹೀನಾಯವಾಗಿ ಮುಗ್ಗರಿಸಿದೆ. ಕಾಂಗ್ರೆಸ್‌ನ ಉಗ್ರಪ್ಪ ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳ್ಳಾರಿಯಲ್ಲಿ ರಾಜಕೀಯದ ಮಾತಿನ ಸಮರಕ್ಕೆ ನಾಂದಿ ಹಾಡಿದ್ದ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಬಿಜೆಪಿ ಸೋಲುತ್ತಿದ್ದಂತೆ ಮಾಡಿರುವ ಟ್ವೀಟ್ ಬಿಜೆಪಿಯ ಗಾಯದ ಮೇಲೆ ಉಪ್ಪು ಸವರಿದಂತಿದೆ.