Actor Sudeep and Shivarajkumar starrer kannada movie 'The Villain' duration is 2 hour 55 minutes. The movie likely release on September 27th 2018. The movie is directed by Prem.
ಇವತ್ತು ಒಂದು ಸಿನಿಮಾ ಗೆಲ್ಲೋಕ್ಕೆ ಅದರ ಅವಧಿ ತುಂಬ ಮುಖ್ಯ. ಚಿತ್ರದ ಅವಧಿ ಸ್ವಲ್ಪ ಹೆಚ್ಚಾದರೂ ಥಿಯೇಟರ್ ನಲ್ಲಿ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕ ಸೀಟ್ ನಿಂದ ಎದ್ದು ಸೀದಾ ಹೊರಗೆ ಹೋಗಿ ಬಿಡುತ್ತಾನೆ. ನಾಟಕ ಆಗಿರಬಹುದು, ಸಿನಿಮಾ ಆಗಿರುಬಹುದು ಈಗ ಅವುಗಳ ಪ್ರದರ್ಶನದ ಅವಧಿ ತಗ್ಗಿದೆ. ಈಗ ಬರುತ್ತಿರುವ ಸಿನಿಮಾಗಳ ಪೈಕಿ ಬಹುಪಾಲು ಚಿತ್ರಗಳು 2 ಗಂಟೆ 30 ನಿಮಿಷಕ್ಕಿಂತ ಹೆಚ್ಚು ಇರುವುದಿಲ್ಲ. ಆದರೆ, 'ದಿ ವಿಲನ್' ಚಿತ್ರದ ಪ್ರದರ್ಶನ ಅವಧಿ ಅದಕ್ಕೂ ಹೆಚ್ಚಿಗೆ ಇದೆ.