ಬೆಂಗಳೂರು, ಜು.18: ಯಮ ಬರ್ತಾನೆ, ನಿಮ್ಮ ಬೈಕ್ ಹಿಂದೆ ಬರ್ತಾನೆ, ಹೆಲ್ಮೆಟ್ ಹಾಕ್ತೀರಾ ಇಲ್ವಾ, ನನ್ನ ಜತೆ ಬರ್ತೀರಾ ಅಂತ ವಾರ್ನಿಂಗ್ ಕೊಡ್ತಾನೆ, ಒಂದು ಹೆಲ್ಮೆಟ್ ಧರಿಸದಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಯಮನ ಕಾನ್ಸೆಪ್ಟ್ ಇಟ್ಟುಕೊಂಡು ನಗರಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿ ಹೇಳಲು ಸಂಚಾರ ಪೊಲೀಸರು ಯಮಧರ್ಮನನ್ನೇ ಧರೆಗಿಳಿಸಿದ್ದರು. ಕಳೆದ ವಾರವಷ್ಟೇ ಹಲಸೂರು ಗೇಟ್ ಸಂಚಾರ ಪೊಲೀಸರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿಹೇಳಲು ಯಮ ಧರ್ಮರಾಜನನ್ನು ಭೂಮಿಗಿಳಿಸಿದ್ದರು.