ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ಮೇಲೆ, 'ಆಪರೇಶನ್ ಕಮಲ' ಭೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಕಾಡುತ್ತಿದೆ. ಹೀಗಾಗಿ, ಬೆಂಗಳೂರಿನ ಹೋಟೆಲ್ ಹಾಗೂ ರೆಸಾರ್ಟ್ ಗಳಲ್ಲಿ ಇರುವುದು ಸೇಫ್ ಅಲ್ಲವೇ ಅಲ್ಲ. ಹೊರರಾಜ್ಯಕ್ಕೆ ಶಿಫ್ಟ್ ಆಗುವುದೇ ಲೇಸು ಅಂತ ಮನಗಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಕೇರಳದ ಕೊಚ್ಚಿ ಕಡೆ ಹಾರಲು ಮುಂದಾದರು.ಇದರ ಬಗ್ಗೆ ಗುಲಾಮ್ ನಬಿ ಆಜಾದ್ ಏನ್ ಹೇಳ್ತಾರೆ ?