ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡ ಮಾತನಾಡಿಸುತ್ತಿದೆ. ನಮ್ಮ ತಂಡಕ್ಕೆ ಮಾತಿಗೆ ಸಿಕ್ಕ ಚಿಕ್ಕಪೇಟೆ ನಿವಾಸಿ ರಂಗನಾಥ್ ಗುಪ್ತಾ, ನಾನು ೪೦-೫೦ ವರ್ಷದಿಂದ ಇಲ್ಲೇ ಇದೀನಿ. ಕೆಲಸಗಳು ಚೆನ್ನಾಗಿ ನಡೆಯುತ್ತಿದೆ. ಆದ್ರೆ ಇನ್ನೂ ಕೆಲಸಗಳು ಆಗಬೇಕು. ಅದಕ್ಕೆ ಸರ್ಕಾರ ಬದಲಾಗಬೇಕು. ಕೇಂದ್ರದಲ್ಲಿ ಬಿಜೆಪಿ ಇರೋದ್ರಿಂದ ಇಲ್ಲೂ ಬಿಜೆಪಿ ಇದ್ರೆ ಒಳ್ಳೇದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.