ಈ ಬಾರಿ ಚುನಾವಣೆಯನ್ನು ಉತ್ತಮವಾಗಿ ನಡೆಸುವ ಮತ್ತು ಮತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಆಯೋಗವು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸದೊಂದು ಆಪ್ ವೊಂದನ್ನು ಲಾಂಚ್ ಮಾಡಿದೆ.ಒಬ್ಬ ಮತದಾರನಿಗೆ ಚುನಾವಣೆಯ ಕುರಿತು ಅಗತ್ಯವಾಗಿ ಬೇಕಾದ ಮಾಹಿತಿಯನ್ನು ಒಳಗೊಂಡ "ಚುನಾವಣಾ ಆಪ್" ಲಾಂಚ್ ಆಗಿದ್ದು, ಹೊಸ ಮಾದರಿಯಲ್ಲಿ ಮತದಾರರನ್ನು ಚುನಾವಣೆಗೆ ಸಿದ್ಧಗೊಳಿಸಲು ಚುನಾವಣಾ ಆಯೋಗವು ಮುಂದಾಗಿದೆ. ಈ ಪ್ರಯತ್ನವು ಕರ್ನಾಟಕದಲ್ಲಿಯೇ ಮೊದಲು ಎನ್ನಲಾಗಿದೆ.ಚುನಾವಣಾ ಆಯೋಗವು ಎಲ್ಲಾ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಈ ಆಪ್ ಬಿಡುಗಡೆ ಮಾಡಿದ್ದು, ಹೊಸ ಮತದಾರರಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಬಳಸಬಹುದಾಗಿದೆ.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot