Former minister and BJP leader Sogadu Shivanna and former MP GS Basavaraj join hands in Lingayat community meeting on Friday in Tumakuru. Before that, they had difference of opinion.
"ಸಮಾಜದ ಮುಖಂಡರಿಗಿಂತ ನಾನು ದೊಡ್ಡವನಲ್ಲ. ಅವರು ಹೇಳಿದ ಮಾತಿಗೆ ತಲೆ ಬಾಗಿದ್ದೇನೆ. ನಾನು ಹಾಗೂ ಜಿ.ಎಸ್.ಬಸವರಾಜ್ ಅವರ ಮಧ್ಯೆ ಸ್ವಲ್ಪ ಮಟ್ಟಿಗೆ ಅಸಮಾಧಾನ ಇದ್ದದ್ದು ಹೌದು. ಸಮಾಜದ ಏಳ್ಗೆಗಾಗಿ ನೀವಿಬ್ಬರೂ ಅದನ್ನು ಮರೆಯಬೇಕು ಅಂತ ಹೇಳಿದಾಗ ತಲೆ ಬಾಗಿಸಿ ಒಪ್ಪಿಕೊಂಡಿದ್ದೇನೆ" ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸೊಗಡು ಶಿವಣ್ಣ ಶನಿವಾರ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.