ನಟಿ ಶ್ರೀದೇವಿ ಅಕಾಲ ಸಾವಿಗೆ ಅಸಲಿ ಕಾರಣ ಇದೇನಾ? | Filmibeat Kannada

2018-02-26 1,420

Did Plastic surgeries and desire to look young led to Sridevi's cardiac arrest.? A post has gone viral on Social Media claiming that Sridevi's plastic surgeries and constant endeavor to look young could have caused her untimely death.

ಒಂದ್ಕಾಲ ಇತ್ತು.... ಆಗ, ಇದೇ ಊರಲ್ಲಿ ಶ್ರೀದೇವಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ... ಪಕ್ಕದ ಹೋಟೆಲ್ ನಲ್ಲೇ ಶ್ರೀದೇವಿ ತಂಗಿದ್ದಾರೆ... ಎಂಬ ವಿಷಯ ತಿಳಿದ ಕೂಡಲೆ ಇಡೀ ಊರಿಗೆ ಊರೇ ಶ್ರೀದೇವಿ ಇದ್ದ ಜಾಗಕ್ಕೆ ಹಾಜರ್ ಆಗುತ್ತಿತ್ತು. 'ಅತಿಲೋಕ ಸು ದರಿ' ಶ್ರೀದೇವಿಯನ್ನ ಒಮ್ಮೆಯಾದರೂ ಕಣ್ಣಾರೆ ನೋಡಬೇಕು ಎಂದು ಬಯಕೆ ಎಷ್ಟೋ ಸಿನಿ ರಸಿಕರಲ್ಲಿತ್ತು. ಶ್ರೀದೇವಿಯ ದರ್ಶನ ಪಡೆಯಲು ಆಕೆ ಉಳಿದುಕೊಳ್ಳುತ್ತಿದ್ದ ಐ.ಬಿ ಅಥವಾ ಹೋಟೆಲ್ ಮುಂದೆ ಕನಿಷ್ಟ ಅಂದರೂ ಸಾವಿರಾರು ಜನ ಪ್ರತಿ ದಿನ ಕಾದು ನಿಲ್ತಿದ್ರು. ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಕಾವಲು ಕಾಯೋಕೆ ಅಂತಲೇ 50 ಮಂದಿ ಅಂಗ ರಕ್ಷಕರು ಹಾಗೂ 100 ಮಂದಿ ಪೊಲೀಸರು ಇದ್ದರು ಅಂದ್ರೆ ನೀವೇ ಊಹಿಸಿಕೊಳ್ಳಿ, ಅಂದು ಶ್ರೀದೇವಿಗೆ ಇದ್ದ ಮಾಸ್ ಮೇನಿಯಾ ಎಂಥದ್ದು ಅಂತ.