ಖಾಸಾಗಿ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಇದೀಗ ಒಂದೇ ಕ್ಲಿಕ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾದ ಆಯ್ಕೆ ಲಭ್ಯವಿದೆ.! ಹಾಗಾಗಿ, ಈಗ ಸುಲಭವಾಗಿ 'ಯುಎಎನ್' ನಂಬರ್ ಮೂಲಕ ಎಸ್ಎಂಎಸ್ ಮುಖಾಂತಹ ಇಪಿಎಫ್ ಹಣವನ್ನು ಚೆಕ್ ಮಾಡಬಹುದು.!! ಹೌದು, ಎಸ್‌ಎಮ್‌ಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಲು ನಿಮ್ಮ ಸ್ಯಾಲರಿ ಸ್ಲಿಪ್‌ನಲ್ಲಿರುವ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿರಬೇಕು. ಈ 'ಯುಎಎನ್' ನಂಬರ್ ಮೂಲಕ ಪಿಎಫ್‌ನ ಬಹು ಖಾತೆಗಳನ್ನು ವಿಲೀನ ಮಾಡಬಹುದಲ್ಲದೇ, ಭವಿಷ್ಯ ನಿಧಿ ಮೊತ್ತವವನ್ನು ತಿಳಿಯುವ ಅವಕಾಶವಿದೆ.!!ಹಾಗಾದರೆ, ಮೊಬೈಲ್ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು ಹೇಗೆ? ಯುಎಎನ್ (UAN) ಸಂಖ್ಯೆಯೊಂದಿಗೆ ಪಿಎಫ್ ಬಹು ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಎಂಬುದನ್ನು ತಿಳಿಯಿರಿ.!!ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲ್ ರೀತಿಯಲ್ಲಿ ಅನುಮೋದನೆಯಾಗಿದ್ದರೆ ಮಾತ್ರ ಈ ಮಾಹಿತಿ ನಿಮಗೆ ಸಿಗಲಿದೆ. ಇಪಿಎಫ್ ಖಾತೆಗಳ ಬಗ್ಗೆ ಕನ್ನಡದಲ್ಲೂ ಮಾಹಿತಿ ಸಿಗಲಿದ್ದು, ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಯನ್ನು ಸಂಪರ್ಕಿಸಿ.!!