Congress and other anti Modi forces blame Narendra Modi's silence on Nirav Modi, Lalit Modi, Vijaya Malya and other scams. Many people blaming PM Modi through #MaunModi hashtag on twitter. Couple of twitters here.
ಗಂಟೆಗಟ್ಟಲೆ ನಿರ್ಗಳವಾಗಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಇದ್ದಕ್ಕಿದ್ದಂತೇ ಮೌನವಾಗಿಬಿಟ್ಟಿದ್ದಾರಾ? ಅಸ್ಖಲಿತ ಮಾತಿನ ಮೋಡಿಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಪಡೆದ ಮೋದಿ ಮೌನವಾಗಿದ್ದು ಯಾಕೆ? ನಿಜಕ್ಕೂ ಮೋದಿ ಮೌನವಾಗಿದ್ದು ಹೌದಾ..? 'ಹೌದು' ಎನ್ನುತ್ತಿದ್ದಾರೆ ಕಾಂಗ್ರೆಸ್ಸಿಗರು, ಮೋದಿ ವಿರೋಧಿಗಳು! ಅಷ್ಟಕ್ಕೂ ಮೋದಿ ಮೌನವಾಗೋದು ಯಾವಾಗ..? ಲಲಿತ್ ಮೋದಿ, ನೀರವ್ ಮೋದಿ, ರಾಫೆಲ್ ಒಪ್ಪಂದ, ವಿಜಯ ಮಲ್ಯ ಎಂಬಿತ್ಯಾದಿ ಪ್ರಶ್ನೆ ಕೇಳಿದರೆ ಸೈಲೆಂಟ್ ಆಗ್ಬಿಡ್ತಾರಂತೆ ನಮ್ಮ ಪಿಎಂ! ಹಾಗಂತ ಟ್ವಿಟ್ಟರ್ ನಲ್ಲಿ ಮೋದಿ ವಿರೋಧಿಗಳು ವ್ಯಂಗ್ಯವಾಡುತ್ತಿದ್ದಾರೆ. ಮೌನಮೋದಿ ಎಂಬ ಹ್ಯಾಶ್ ಟ್ಯಾಗ್ ವೊಂದು ಟ್ವಿಟ್ಟರ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ, ಮೋದಿ ಬಗೆಗಿನ ವ್ಯಂಗ್ಯ, ಅಪಹಾಸ್ಯ, ಲೇವಡಿಗಳನ್ನೆಲ್ಲ ಈ ಹ್ಯಾಶ್ ಟ್ಯಾಗ್ ಹೊತ್ತು ಸಾಗುತ್ತಿದೆ!