ಸುದೀಪ್ ಅವರು ನಟ ಅರುಣ್ ಗೌಡ ಅವರಿಗೆ ಹೀಗೊಂದು ಬಿರುದು ಕೊಟ್ಟಿದ್ದು ಯಾಕೆ ? | Filmibeat Kannada

2018-01-24 1,005

ಮುದ್ದು ಮನಸೇ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ನಟ ಅರುಣ್ ಗೌಡ ಈಗ ಸ್ಟಾರ್ ಆಗಿದ್ದಾರೆ . ಆದರೆ ಅರುಣ್ ಗೌಡ ಅವರ ಸುಮಾರು ಕೆಲಸಗಳು ಅರ್ಧಕ್ಕೆ ನಿಲ್ಲುತ್ತಿದ್ದವು . ಅವರು ಕೆಲಸ ಮಾಡಿದ ಪ್ರಾಜೆಕ್ಟ್ ಗಳು , ಅವರ ಡಿಗ್ರಿ ಎಲ್ಲಾವೂ ಅರ್ಧಕ್ಕೆ ನಿಲ್ಲುತ್ತಿತ್ತು . ಆದರೆ ಈಗ 3 ಗಂಟೆ 30 ದಿನ 30 ಸೆಕೆಂಡು ಚಿತ್ರ ತೆರೆ ಮೇಲೆ ಬಂದಿದೆ . ನೋಡಿದ ಮಂದಿ ಚಿತ್ರವನ್ನು ಇಷ್ಟ ಪಡುತ್ತಿದ್ದಾರೆ . ಅದರಲ್ಲೂ ಅರುಣ್ ಗೌಡ ಅವರನ್ನು ಚಿತ್ರ ನೋಡಿ ಜನ ಮೆಚ್ಚಿದ್ದಾರೆ .


3 ಗಂಟೆ 30 ದಿನ 30 ಸೆಕೆಂಡು’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಮಧ್ಯ ಚಿತ್ರದ ಪ್ರಚಾರಕ್ಕಾಗಿ ಬಿಗ್ ಬಾಸ್ ಶೋಗೆ ಬಂದಿದಾಗ ಸುದೀಪ್ ಅವರು ಚಿತ್ರದ ನಾಯಕ ಅರುಣ್ ಗೌಡ ಅವರಿಗೆ ಇನ್-ಕಂಪ್ಲೀಟ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ದಾರೆ. ಅರುಣ್ ಗೌಡ ಅವರು ಯಾವುದೇ ಕೆಲಸ ಹಿಡಿದರೂ ಅದನ್ನು ಮುಗಿಸುವಷ್ಟರಲ್ಲಿ ಅದು ಅರ್ಧಕ್ಕೆ ನಿಂತು ಹೋಗುತ್ತದೆಯಂತೆ. ಅವರು ಡಿಗ್ರಿ ಕೂಡ ಕಂಪ್ಲೀಟ್ ಮಾಡಲಿಲ್ಲವಂತೆ. ಇದನ್ನ ಕೇಳಿದ ಸುದೀಪ್ ಅವರು ಅರುಣ್ ಗೌಡ ಅವರಿಗೆ ಈ ಬಿರುದನ್ನು ನೀಡಿದ್ದಾರೆ .


Kiccha Sudeep has given a title to the new rising actor of sandalwood . The title and the reason behind it is interesting

Videos similaires