ಕನ್ನಡ ಚಿತ್ರರಂಗದಲ್ಲಿ ಪರಭಾಷಿಗರಿಗೆ ಅದ್ಧೂರಿ ಸ್ವಾಗತ ನೀಡುವುದು ಹೊಸದೇನಲ್ಲ. ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬರುವ ಕಲಾವಿದರನ್ನ ಸಂತೋಷದಿಂದ ಬರಮಾಡಿಕೊಂಡು, ಅಷ್ಟೇ ಖುಷಿಯಿಂದ ಕಳುಹಿಸಿಕೊಡುವ ಸಂಸ್ಕ್ರತಿ ಇತ್ತೀಚೆಗೆ ಹೆಚ್ಚಾಗಿದೆ.
ಕನ್ನಡ ಚಿತ್ರಗಳ ಆಡಿಯೋ ರಿಲೀಸ್, ಚಿತ್ರದ ಮುಹೂರ್ತ ಅಂತಹ ಕಾರ್ಯಕ್ರಮಗಳಲ್ಲಿ ಬೇರೆ ಭಾಷೆಯ ನಟರು ಅತಿಥಿಯಾಗಿ ಬರುವುದು ಸಾಮಾನ್ಯವಾಗಿದೆ. ಅದರಲ್ಲಿ, ಕಳೆದ ನಾಲ್ಕೈದು ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಎಂಬ ತೆಲುಗಿನ ಯುವ ನಟ ಅಟ್ರ್ಯಾಕ್ಷನ್ ಆಗಿದ್ದಾರೆ.
ಗಾಂಧಿನಗರದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ವಿಜಯ್ ದೇವರಕೊಂಡ ಬರ್ತಾರ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುವಷ್ಟು ಪ್ರಭಾವ ಬೀರಿದೆ. ಅಷ್ಟಕ್ಕೂ, ವಿಜಯ್ ಮೇಲೆ ಸ್ಯಾಂಡಲ್ ವುಡ್ ಮಂದಿಗ್ಯಾಕೆ ಇಷ್ಟೊಂದು ಪ್ರೀತಿ? 'ಅರ್ಜುನ್ ರೆಡ್ಡಿ' ನಾಯಕನ ಈ ಯಶಸ್ಸಿನ ಹಿಂದಿರುವ ಸತ್ಯವೇನು?
Actor Vijay Devarakonda was seen in Big Boss Kannada 5 reality show with kiccha sudeep for innovative international film festival event.