ರಿಯಾಝ್ ಔಟ್ ಆಗಿದ್ದು ಯಾಕೆ.? ವೀಕ್ಷಕರೇ ಕೊಟ್ಟ ಹತ್ತು ಕಾರಣಗಳಿವು.! | Filmibeat Kannada

2018-01-16 2,910

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹದಿಮೂರನೇ ವಾರ 'ಕಾಮನ್ ಮ್ಯಾನ್' ರಿಯಾಝ್ ಔಟ್ ಆದರು. ಹಾಗ್ನೋಡಿದ್ರೆ, 'ಬಿಗ್ ಬಾಸ್' ಶೋ ಶುರು ಆದಾಗ, ರಿಯಾಝ್ ಗ್ರ್ಯಾಂಡ್ ಫಿನಾಲೆ ವರೆಗೂ ಬಂದೇ ಬರುತ್ತಾರೆ ಅಂತ ವೀಕ್ಷಕರು ಊಹಿಸಿದ್ದರು. ರಿಯಾಝ್, ದಿವಾಕರ್, ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಕೂಡ ಆರಂಭ ಆಯ್ತು. 'ಬಿಗ್ ಬಾಸ್ ಕನ್ನಡ-5' ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ರಿಯಾಝ್ ಹೊರ ಹೊಮ್ಮುತ್ತಿರುವಾಗಲೇ, ಎಲಿಮಿನೇಟ್ ಆಗ್ಬಿಟ್ಟರು.

ಇದಕ್ಕೆ ಕಾರಣ ಏನಿರಬಹುದು.? ಮಾತ್ತೆತ್ತಿದ್ರೆ ರೂಲ್ಸ್ ಬಗ್ಗೆ ಮಾತನಾಡುತ್ತಿದ್ದ ರಿಯಾಝ್ ಗೆ ಅದೇ ರೂಲ್ಸ್ ಪೆಟ್ಟಾಯ್ತಾ.? 'ಕಾಮನ್ ಮ್ಯಾನ್' ಗುಂಪಲ್ಲಿ ಬಿರುಕು ಮೂಡಿದ್ದೇ ರಿಯಾಝ್ ನಿರ್ಗಮನಕ್ಕೆ ಕಾರಣ ಆಯ್ತಾ.?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನ ತಪ್ಪದೇ ವೀಕ್ಷಿಸುವ ವೀಕ್ಷಕರು ರಿಯಾಝ್ ಔಟ್ ಆಗಿದ್ದು ಏಕೆ ಎಂಬುದಕ್ಕೆ ಕೆಲವು ಕಾರಣಗಳನ್ನ ಪಟ್ಟಿ ಮಾಡಿದ್ದಾರೆ.'
Kannada Big Boss season 5 on the 13th week of the show common man contestant Riyaz got eliminated . And regular viewers of the show have listed the reasons why Riyaz got eliminated .

Videos similaires