ಯಾವ ನಟರು ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ? | Filmibeat Kannada

2018-01-13 907

ಕರ್ನಾಟಕ ವಿಧಾನಸಭೆಯ ಚುನಾವಣೆ ಇದೇ ವರ್ಷ ನಡೆಯಲಿದೆ. ದೇಶದ ಕಣ್ಣು ಕರ್ನಾಟಕ ಚುನಾವಣೆ ಮೇಲೆ ಬಿದ್ದಿದೆ. ಅದೇ ರೀತಿ ರಾಜಕಾರಣಿಗಳ ಕಣ್ಣು ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲೆ ಬಿದ್ದಿದೆ. ಚುನಾವಣೆಗೆ ಇನ್ನು ಕೆಲತಿಂಗಳು ಮಾತ್ರ ಬಾಕಿ ಇದೆ. ಈಗಲೇ ಸ್ಟಾರ್ ನಟ-ನಟಿಯರನ್ನ ತಮ್ಮ ಪಕ್ಷದ ಪರ ಸೆಳೆಯುವ ಹರಸಾಹಸ ನಡೆಯುತ್ತಿದೆ.

ಕನ್ನಡದ ಸೂಪರ್ ಸ್ಟಾರ್ ಗಳಾದ ದರ್ಶನ್, ಸುದೀಪ್ ಅವರನ್ನ ಅಧಿಕೃತವಾಗಿ ರಾಜಕೀಯಕ್ಕೆ ಕರೆ ತರುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆಯಾದರೂ, ಇಬ್ಬರು ರಾಜಕೀಯಕ್ಕೆ ಬರಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿಗಾಗಿ ಚುನಾವಣ ರಂಗಕ್ಕೆ ಧುಮುಕುವುದು ಬಹುತೇಕ ಖಚಿತ.

ಇವರುಗಳು ಚುನಾವಣೆಗಂತೂ ಸ್ಪರ್ಧಿಸಲ್ಲ. ಆದ್ರೆ, ಪ್ರಚಾರ ಮಾಡೋದು ಮಾತ್ರ ಪಕ್ಕಾ ಎನ್ನಲಾಗಿದೆ. ಹಾಗಿದ್ರೆ, ಯಾವ ಯಾವ ನಟ-ನಟಿಯರು ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ

Every elections in Karnataka always have star campaigners from sandalwood . Let's see which all stars will campaign for which all parties

Videos similaires