ಹಿಂದೂ ಸಂಘಟನೆ ಕಾರ್ಯಕರ್ತರ ನಿರಂತರ ದೌರ್ಜನ್ಯ, ಬೆದರಿಕೆಗೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ. ಪ್ರಕರಣ ಸಂಬಂಧ ಮೂಡಿಗೆರೆ ನಗರ ಘಟಕದ ಬಿಜೆಪಿಯ ಯುವಮೋರ್ಚಾ ಅಧ್ಯಕ್ಷನನ್ನು ಬಂಧಿಸಲಾಗಿದೆ. ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಆಕೆ 'ನಾನು ಮುಸ್ಲಿಮರನ್ನು ಪ್ರೀತಿಸುತ್ತೇನೆ' ಎಂದು ಹೇಳಿಕೊಂಡಿದ್ದಳು. ಆಕೆ ಹಿಂದೂ ಸಂಘಟನೆ ಕಾರ್ಯಕರ್ತರ ಕಿರುಕುಳ ತಾಳಲಾರದೆ ನೇಣಿಗೆ ಕೊರಳೊಡ್ಡಿದ್ದಾಳೆ. ಪ್ರಕರಣದ ಬಗ್ಗೆ ಈ ಹಿಂದೆ ಅಣ್ಣಾಮಲೈ ಪ್ರತಿಕ್ರಿಯಿಸಿದ್ದರು . ಅದಾದ ನಂತರ ಮಾದ್ಯಮದವರು ಹಾಗು ವಿವಿಧ ಸಂಘಟನೆಗಳು ಪ್ರಕರಣಗಳನ್ನು ತಿರುಚುತ್ತಿದೆ ಹಾಗು ವಿನಾಕಾರಣ ವಿಷಯವನ್ನು ಕೆದುಕುವ ಕೆಲಸ ನಡೆಯುತ್ತಿದೆ ಎಂದು ಮಾಧ್ಯಮದವರ ಜೊತೆ ಅಣ್ಣಮಲೈ ಮತ್ತೊಮ್ಮೆ ಹೇಳಿದ್ದಾರೆ . ಪ್ರಕರಣ ಬಹಳ ಗುಂಭೀರವಾಗಿದ್ದು . ಪ್ರಕರಣ ಹಾವಿನಂತೆ ಇದೆ . ಸುಮ್ಮನೆ ಅದನ್ನು ಕೆಣಕಿ ಕಷ್ಟಕ್ಕೆ ಸಿಲುಕಬೇಡಿ ಚಿಕ್ಕಮಗಳೂರು ಬಹಳ ಶಾಂತಿಯುತ್ತ ಜಿಲ್ಲೆ ಸುಮ್ಮನೆ ವಿನಾಕಾರಣ ಗಲಭೆ ಬೇಡ ಎಂದು ಎಚ್ಚರಿಸಿದ್ದಾರೆ .
After the dhanyashree mudigere case , media and local organizations are trying to flip the story according to their advantages and s p Annamalai have a strong message for them