ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆಗೆ ಮೋದಿ ಬರ್ತಾರಾ ? | FIlmibeat Kannada

2018-01-10 1,142

ಕನ್ನಡ ಸಿನಿಮಾರಂಗದಲ್ಲಿ ಪ್ರಚಾರದ ವಿಚಾರ ಅಂದರೆ ಪ್ರತಿಯೊಬ್ಬರು ಜೋಗಿ ಪ್ರೇಮ್ ತರ ಚಿತ್ರವನ್ನ ಪ್ರಚಾರ ಮಾಡಬೇಕು. ಅನ್ನುವಷ್ಟರ ಮಟ್ಟಿಗೆ ತಮ್ಮ ಸಿನಿಮಾಗಳ ಪಬ್ಲಿಸಿಟಿ ಮಾಡುತ್ತಾರೆ. ಕೆಲವೊಮ್ಮೆ ಅವರ ಆಶ್ವಾಸನೆಗಳು ಸುಳ್ಳಾಗಿದ್ದರು ಇನ್ನು ಕೆಲವೊಮ್ಮೆ ಸತ್ಯವಾಗಿರುವುದು ಇದೆ. ಸದಾ ಸಿನಿಮಾ ಪಬ್ಲಿಸಿಟಿಯಲ್ಲಿ ಮೊದಲಿರುತ್ತಿದ್ದ ಜೋಗಿ ಪ್ರೇಮ್ ಅವರ ಹೆಸರನ್ನ ಬಳಸಿಕೊಂಡು ಅವರಿಗೆ ಶಾಕ್ ನೀಡಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಗ್ರಾಫಿಕ್ಸ್ ಕೆಲಸ ಬಾಕಿ ಇರುವುದರಿಂದ ಚಿತ್ರತಂಡ ಟೀಸರ್ ಬಿಡುಗಡೆ ತಂಟೆಗೆ ಹೋಗಿಲ್ಲ. ಆದರೆ ಅದ್ಯಾರೋ ಗಾಂಧಿನಗರದ ಒಂದಿಷ್ಟು ಮಂದಿ ಮೋದಿಗಾಗಿ 'ದಿ ವಿಲನ್' ಟೀಂ ಕಾಯುತ್ತಿದೆ ಅಂತ ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ. ಒಟ್ಟಾರೆ ಪ್ರೇಕ್ಷಕರ ಮುಂದೆ ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್ ಮಾಡುತ್ತಿದ್ದ ಪ್ರೇಮ್ ಅವರ ಹೆಸರನ್ನ ಬಳಸಿಕೊಂಡು ಯಾರೋ ಅವರಿಗೆ ಶಾಕ್ ನೀಡಿರುವುದಂತು ನಿಜ.


The master mind of promotions in Kannada film industry Jogi Prem is yet again on news . But this time it's all false