ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಮೋಜಿ ಫಿಲಂ ಸಿಟಿಯಲ್ಲಿ ಕೆಲಸ ಮಾಡೋದು ಶಾಪ ಅಂದಿದ್ಯಾಕೆ ಗೊತ್ತಾ ?

2018-01-08 5

ರಾಮೋಜಿ ಫಿಲ್ಮ್ ಸಿಟಿ....ಹೈದರಾಬಾದ್ ನಲ್ಲಿರುವ ಅತಿ ದೊಡ್ಡ ಸಿನಿಮಾನಗರಿ. ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳು ಇಲ್ಲಿ ಚಿತ್ರೀಕರಣ ಮಾಡುತ್ತೆ. ಯಾಕಂದ್ರೆ, ಚಿತ್ರೀಕರಣಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳು ಇಲ್ಲಿವೆ. ಪೌರಾಣಿಕ, ಐತಿಹಾಸಿಕ, ಇತ್ತೀಚಿನ ಶೈಲಿಯ ಸಿನಿಮಾಗಳು ಮಾಡಲು ಸೂಕ್ತವಾದ ಜಾಗ ಇದು. ಸದ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ರಾಮೋಜಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಸತತ ಮೂರ್ನಾಲ್ಕು ತಿಂಗಳಿನಿಂದ ದರ್ಶನ್, ಅರ್ಜುನ್ ಸರ್ಜಾ, ಸೋನು ಸೂದ್, ಸ್ನೇಹಾ, ಸೇರಿದಂತೆ ಕುರುಕ್ಷೇತ್ರ ಚಿತ್ರತಂಡ ರಾಮೋಜಿಯಲ್ಲಿ ಬೀಡುಬಿಟ್ಟಿದೆ. ಈ ನಡುವೆ ದುರ್ಯೋಧನ ದರ್ಶನ್ ಬೇಸರಗೊಂಡಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುವುದು ನಮಗೊಂದು ಶಾಪವೆಂದಿದ್ದಾರೆ. ''ರಾಮೋಜಿ ಫಿಲ್ಮ್ ಸಿಟಿಯಲ್ಲೇ ಬಂದು ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಬಂದಿದೆ. ನಿಜಕ್ಕೂ ಅದೊಂದು ಶಾಪವೇ ಸರಿ. ಯಾಕೆಂದರೆ, ನಮ್ಮಲ್ಲಿ ಅಂತಹ ಜಾಗವಿಲ್ಲ. ಹೇಳಿಕೊಳ್ಳೋಕೆ ಒಳ್ಳೆಯ ಸ್ಟುಡಿಯೋಗಳೂ ಇಲ್ಲ'' ಎಂದು ದಾಸ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

Challenging star Darshan shares his anger and says it is a curse to go to Ramoji film city. The reason behind this should make every Kannadiga think