ರಜನಿಕಾಂತ್ - ಕರುಣಾನಿಧಿ ಭೇಟಿ ಹಿಂದಿನ ಕಾರಣ ಏನು ? | Oneindia Kannada

2018-01-04 209

ಇತ್ತೀಚೆಗಷ್ಟೆ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಇಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ಸಂಬಂಧ ಪೋಯೆಸ್ ಗಾರ್ಡನ್ ನಿಂದ ಗೋಪಾಪುರಂಗೆ ಹೋಗುವ ದಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಎಂಕೆ ನಾಯಕ ಕರುಣಾನಿಧಿ ನನ್ನ ಸ್ನೇಹಿತರು. ಹಾಗಾಗಿ ಅವರನ್ನು ಗೌರವದಿಂದ ನಾನು ಭೇಟಿಯಾಗುತ್ತೇನೆ. ನಾನು ಅವರಿಗೆ ಹೊಸ ವರ್ಷದ ಶುಭಾಶಯ ಹೇಳಲು ಹೋಗುತ್ತಿದ್ದೇನೆ," ಎಂದು ಹೇಳಿದ್ದಾರೆ. ಇದೇ ವೇಳೆ ರಜನಿಕಾಂತ್ ಇತರ ರಾಜಕೀಯ ಪಕ್ಷದ ಮುಖಂಡರನ್ನು ಭೇಟಿಯಾಗಲು ತಾನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪಕ್ಷ ಸ್ಥಾಪಿಸಿದರೆ ಕರುಣಾನಿಧಿಯವರ ಡಿಎಂಕೆ ಬದ್ಧ ಎದುರಾಳಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಹೀಗಿದ್ದೂ ಉಭಯ ನಾಯಕರು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ರಜನೀಕಾಂತ್ ಕರುಣಾನಿಧಿಯವರ ಜತೆ ಏನನ್ನು ಚರ್ಚಿಸಬಹುದು, ಭೇಟಿಯ ಉದ್ದೇಶ ಏನಾಗಿರಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Rajinikanth reaches DMK’s chief Karunanidhi’s residence in Tamil Nadu and the superstar told the media that it was just a casual meet as Karunanidhi is his friend.