ಕನ್ನಡಿಗರಾಗಿ 'ಕಷ್ಟ' ಅಂತ ಬರೆಯಲು ಅಷ್ಟೊಂದು ಕಷ್ಟನಾ ? | Filmibeat Kannada

2017-12-29 1,393

'ಕಷ್ಟ' ಎಂಬ ಪದ ಬರೆಯಲು ಕಷ್ಟವೇ.? ಅಪ್ಪಟ ಕನ್ನಡಿಗರೇ ಉತ್ತರ ಕೊಡಿ... ಕಷ್ಟ ಎಂಬ ಪದ ಅಷ್ಟೊಂದು ಕಠಿಣವಾಗಿದೆಯೇ.? ಚಂದನವನದ ಬೆಳ್ಳಿ ಪರದೆ, ಕಿರುತೆರೆ ಮೇಲೆ ಕನ್ನಡ ಡೈಲಾಗ್ ಗಳನ್ನು ಹೇಳುವ ಕನ್ನಡ ನಟ-ನಟಿಯರಿಗೆ 'ಕಷ್ಟ' ಎಂದು ಬರೆಯಲು ಗೊತ್ತಿಲ್ಲವೇ.? ಬಹುಶಃ ಖ್ಯಾತಿಯ ಉತ್ತುಂಗಕ್ಕೆ ಏರಿದ್ಮೇಲೆ, ಜೀವನದಲ್ಲಿ ಎಲ್ಲವೂ ಸಿಕ್ಕ ಮೇಲೆ 'ಕಷ್ಟ' ಅನ್ನೋದು ಸೆಲೆಬ್ರಿಟಿಗಳಿಗೆ ಗೊತ್ತಿಲ್ಲದೇ ಇರಬಹುದು.?! ಆದ್ರೆ, 'ಕಷ್ಟ' ಎಂದು ಕನ್ನಡ ಭಾಷೆಯಲ್ಲಿ ಬರೆಯಲು ಬರಲ್ವೇ.ಇಂತಹ ಹತ್ತು ಹಲವು ಪ್ರಶ್ನೆಗಳು, ಅನುಮಾನ ಅಪ್ಪಟ ಕನ್ನಡಿಗರಲ್ಲಿ ಕಾಡಿದ್ದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಿನ್ನೆಯ ಸಂಚಿಕೆ ನೋಡಿದ್ಮೇಲೆ. ಈ ವಾರ ಸ್ಪರ್ಧಿಗಳಿಗೆಲ್ಲ 'ಪ್ರಜಾರಾಜ್ಯ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ, ಎರಡು ಪಕ್ಷದ ಮುಖಂಡರು, ತಮ್ಮ ಪಕ್ಷದ ಲಾಂಛನ, ಹೆಸರು, ಘೋಷಣೆಯನ್ನ ಅನಾವರಣ ಮಾಡಬೇಕಿತ್ತು. 'ಶಾಂತಿ ಕ್ರಾಂತಿ' ಎಂದು ತಮ್ಮ ಪಕ್ಷಕ್ಕೆ ಶ್ರುತಿ ಪ್ರಕಾಶ್ ಹೆಸರಿಟ್ಟರು. ತಮ್ಮ ಪಕ್ಷದ ಧ್ಯೇಯವನ್ನ ಸಾರುವ ಫಲಕಗಳನ್ನು ಹಿಡಿದುಕೊಂಡು, ಘೋಷಣೆಯನ್ನ ಕೂಗುತ್ತಾ ಪಕ್ಷದ ಕಾರ್ಯಕರ್ತರಾದ ಜಯರಾಂ ಕಾರ್ತಿಕ್, ಅನುಪಮಾ ಗೌಡ ಹಾಗೂ ಕೃಷಿ ತಾಪಂಡ ವೇದಿಕೆ ಮೇಲೆ ಬಂದರು. ಪಕ್ಷದ ಧ್ಯೇಯೋದ್ದೇಶವನ್ನ ಸಾರುವ ಫಲಕಗಳತ್ತ ಕಣ್ಣಾಡಿಸಿದಾಗ ಕಂಡ ಮೊದಲ ಪದವೇ 'ಕಕ್ಷ್ಟ'.! 'ಕಷ್ಟ ಪಡುವವರಿಗೆ ದೇವರು. ಕಷ್ಟದಲ್ಲಿ ಇರುವವರಿಗೆ ನಾವು' ಎಂಬ ಧ್ಯೇಯ 'ಶಾಂತಿ ಕ್ರಾಂತಿ' ಪಕ್ಷದ್ದು. ಆದ್ರೆ, 'ಕಷ್ಟ' ಹೋಗಿ 'ಕಕ್ಷ್ಟ' ಆಗ್ಹೋಗಿದೆ. ಅಷ್ಟಕ್ಕೂ, ಹೀಗೆ ಬರೆದವರು ಯಾರು ಅನ್ನೋದು ನಮಗೆ ಗೊತ್ತಿಲ್ಲ. ಈ ಹಿಂದೆ 'ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ.?' ಎಂದು ಕೇಳಿದಾಗ ಜಗನ್ನಾಥ್ ಚಂದ್ರಶೇಖರ್ 32 ಎಂದು ಹೇಳಿದ್ದು ಇದೇ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ. ಈಗ ಅದೇ ಕಾರ್ಯಕ್ರಮದಲ್ಲಿ ಕನ್ನಡ 'ಕಷ್ಟ'ವಾಗಿರುವುದು ಕನ್ನಡಿಗರಿಗೆ ಬೇಸರ ತಂದಿದೆ.

Bigg Boss Kannada season 05: Week 10: big boss is one of the big reality show in colors kannada and their Bigg Boss contestants are struggling to write Kannada.