ಕರ್ನಾಟಕ ವಿಧಾನಸಭಾ ಚುನಾವಣೆ 2018 : ಇಲ್ಲಿದೆ ರಾಜ್ಯ ಗುಪ್ತಚರ ವರದಿ

2017-12-26 2,252

2014ರ ಲೋಕಸಭಾ ಚುನಾವಣೆಯ ನಂತರ ತನ್ನ ನೆಲೆಯನ್ನು ವೇಗವಾಗಿ ವಿಸ್ತರಿಸಿಕೊಳ್ಳುತ್ತಿರುವ ಬಿಜೆಪಿ, ಮುಂದಿನ ವರ್ಷ ಕರ್ನಾಟಕವೂ ಸೇರಿದಂತೆ ಐದು ರಾಜ್ಯಗಳ (ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ) ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ದತೆ ನಡೆಸಿಕೊಳ್ಳುತ್ತಿದೆ. ಇದರ ಜೊತೆಗೆ, ತಾನು ಅಧಿಕಾರದಲ್ಲಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡದಲ್ಲೂ ಸರಕಾರದ ಅವಧಿ ಜನವರಿ 2019ರಲ್ಲಿ ಮುಕ್ತಾಯಗೊಳ್ಳಲಿದೆ. ಈ ಎಲ್ಲಾ ಮೂರು ರಾಜ್ಯಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ.ಈ ನಡುವೆ, ರಾಜ್ಯ ಗುಪ್ತಚರ ಇಲಾಖೆ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಬಗ್ಗೆ ನೀಡಿದೆ ಎನ್ನಲಾಗುತ್ತಿರುವ ವರದಿಯ ಪ್ರಕಾರ, ಬಿಜೆಪಿ ಮತ್ತೆ ಮಗುದೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ನೆಚ್ಚಿಕೊಳ್ಳುವಂತೆ ಮಾಡಿದೆ.ಚುನಾವಣಾ ತಂತ್ರಗಾರಿಕೆಗೆ ನಿಪುಣ ನಾಯಕರ ನಿಯೋಜನೆಗೆ ಮುಂದಾಗಿರುವ ಅಮಿತ್ ಶಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಯಾದವ್ ಅವರನ್ನು ಈಗಾಗಲೇ ಕರ್ನಾಟಕಕ್ಕೆ ಹೋಗುವಂತೆ ಸೂಚಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತನಗೆ ನೀಡಿರುವ ಜವಾಬ್ದಾರಿಯನ್ನು ಯಾದವ್ ವಹಿಸಿಕೊಳ್ಳಲಿದ್ದಾರೆ.


Karnataka Assembly elections 2018, What State intelligence report says? As per report, Prime Minister Narendra Modi is the key factor and his campaign will benefit party.

Videos similaires