Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

2017-12-19 438

ಒನ್‌ಪ್ಲಸ್‌ ಟಿ ಸ್ಟಾರ್‌ವಾರ್ಸ್ ಲಿಮಿಟೆಡ್ ಎಡಿಷನ್ ಸ್ಮಾರ್ಟ್‌ಫೋನ್‌ಗಳನ್ನು ಸ್ಟಾರ್‌ವಾರ್ಸ್ ಅಭಿಮಾನಿಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸೀಮಿತ ಆವೃತ್ತಿಯ ಈ ಸ್ಮಾರ್ಟ್‌ಫೋನ್‌ಗಳು ಸ್ಟಾರ್ ವಾರ್ಸ್ ಚಲನಚಿತ್ರಗಳ ಥೀಮ್‌ಗಳ ಜೊತೆಗೆ ಸ್ಟಾರ್‌ವಾರ್ಸ್‌ನ ಟ್ರೇಡ್‌ಮಾರ್ಕ್ ಚಿತ್ರವನ್ನು ಮೊಬೈಲ್ ಹಿಂಬಾಗದಲ್ಲಿ ಅಳವಡಿಸಲಾಗಿದೆ.!!
ವಿನ್ಯಾಸದಲ್ಲಿ ಮಾತ್ರವಲ್ಲದೆ ಒನ್‌ಪ್ಲಸ್ 5T ಮೊಬೈಲ್ ತಂತ್ರಜ್ಞಾನದಲ್ಲಿಯೂ ಸ್ಟಾರ್ ವಾರ್ಸ್ ವಿಷಯಗಳು ಸೇರಿಕೊಂಡಿದ್ದು, ಸ್ಟಾರ್‌ವಾರ್ ಅಭಿಮಾನಿಗಳು ಕೊನೆಯವರೆಗೂ ಸ್ಟಾರ್‌ವಾರ್ಸ್ ಅನುಭವ ಹೊಂದಲು ಸ್ಟಾರ್‌ವಾರ್ಸ್ ಥೀಮ್‌ಗಳು, ವಾಲ್‌ಪೇಪರ್ ಮತ್ತ ಪ್ಯಾಕ್ಸ್‌ಗಳನ್ನು ಮೊದಲೇ ಇನ್‌ಸ್ಟಾಲ್ ಮಾಡಲಾಗಿದೆ.!! ಇನ್ನು ಲಿಮಿಟೆಡ್ ಆವೃತ್ತಿ ಸ್ಟಾರ್ ವಾರ್ಸ್ OnePlus 5T ಫೋನ್‌ಗಳಲ್ಲಿ ಕೇವಲ ಸ್ಟಾರ್ ವಾರ್ಸ್ ವಿನ್ಯಾಸ ಮತ್ತು ಮತ್ತು ಕಸ್ಟಮೈಸ್ ಸ್ಟಾರ್ ವಾರ್ಸ್ ವಿಷಯಗಳು ಮಾತ್ರವಲ್ಲದೆ, 6GB RAM ಮತ್ತು 8GB RAM ರೂಪಾಂತರದ ಆಯ್ಕೆಗಳನ್ನು ಹೊಂದಿರುವ ಟಾಪ್-ಆಫ್-ಲೈನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಚಿಪ್‌ಸೆಟ್ ಬೆಂಬಲಿತ ಸ್ಮಾರ್ಟ್‌ಫೋನ್ ಇದಾಗಿದೆ.!!