Saregamapa season 14 , Hamsalekha was mesmerized by listening to 10 year old jnanesh

2017-12-19 26

'ಜೀ ಕನ್ನಡ' ವಾಹಿನಿಯ 'ಸರಿಗಮಪ' ಕಾರ್ಯಕ್ರಮ ಮೆಗಾ ಆಡಿಷನ್ ನಲ್ಲಿಯೇ ಮೋಡಿ ಮಾಡಿದೆ. ಎರಡು ವಾರ ಕಾರ್ಯಕ್ರಮದ ಮೆಗಾ ಆಡಿಷನ್ ನಡೆದಿದ್ದು, ಇದರಲ್ಲಿ ಒಟ್ಟು 15 ಸ್ಪರ್ಧಿಗಳು ಆಯ್ಕೆ ಆಗಿದ್ದಾರೆ. ಇನ್ನು ಈ ಬಾರಿ ಕಾರ್ಯಕ್ರಮದಲ್ಲಿ ಆಯ್ಕೆ ಆದ ಮಕ್ಕಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಇದ್ದಾರೆ. ಒಬ್ಬೊಬ್ಬರು ಕೂಡ ಹಾಡು ಹಾಡುವುದರಲ್ಲಿ ಎತ್ತಿದ ಕೈ. ಇನ್ನು ಬಡತನದಲ್ಲಿ ಬೆಳೆದ ಸಾಕಷ್ಟು ಮಕ್ಕಳು ಈ ಬಾರಿ 'ಸರಿಗಮಪ' ವೇದಿಕೆ ಏರಿದ್ದಾರೆ. ಅದರಲ್ಲಿ ಒಬ್ಬ ಬಳ್ಳಾರಿಯ ಜ್ಞಾನೇಶ್. ಕಾರ್ಯಕ್ರಮದಲ್ಲಿ ಸೃಜನ್ ಮತ್ತು ಲಕ್ಷ್ಮಿ ನಂತರ ಜ್ಞಾನೇಶ್ ಎಂಬ ಹುಡುಗ ಕೂಡ ಎಲ್ಲರ ಗಮನ ಸೆಳೆದಿದ್ದಾನೆ. 10 ವರ್ಷದ ಈ ಹುಡುಗನ ಹಾಡು ಕೇಳಿ ಕಾರ್ಯಕ್ರಮದ ಮೂರು ತೀರ್ಪುಗಾರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಕೈ ಮುಗಿದಿದ್ದಾರೆ.

Jnanesh from Bellari during his mega auditions in Saregamapa season 14 Kannada has mesmerized judges and every single person sitting in the studio. Irrespective of the poverty which his family is facing the kid has huge talent and will be a very promising contestant this season.