ಗುಜರಾತ್ ಚುನಾವಣಾ ಫಲಿತಾಂಶದಿಂದ ಪಕ್ಕದ ರಾಜಸ್ಥಾನದ ಮೇಲೇನು ಪರಿಣಾಮ ? | Oneindia Kannada

2017-12-18 197

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪಕ್ಕದ ರಾಜಸ್ಥಾನದ ಮೇಲೆ ಪ್ರಭಾವ ಬೀರಲಿದೆಯೇ?. ಪಕ್ಕದ ರಾಜ್ಯದ ಇಬ್ಬರು ಪ್ರಭಾವಿ ನಾಯಕರು ಗುಜರಾತ್ ಚುನಾವಣೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್, ಬಿಜೆಪಿಯ ಭೂಪೇಂದರ್ ಯಾದವ್ ಗುಜರಾತ್ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ವಿಶೇಷವೆಂದರೆ ಏಪ್ರಿಲ್‌ನಲ್ಲಿ ಎರಡೂ ಪಕ್ಷಗಳು ರಾಜ್ಯದ ಉಸ್ತುವಾರಿಯನ್ನು ಬದಲಾವಣೆ ಮಾಡಿದ್ದವು. ಈ ಇಬ್ಬರೂ ನಾಯಕರು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಜೋಧ್‌ಪುರದ ಮೂಲದ ಅಶೋಕ್ ಗೆಹ್ಲೋಟ್ ಎರಡು ಬಾರಿ ರಾಜಸ್ಥಾನದ ಮುಖ್ಯ ಮಂತ್ರಿಯಾಗಿದ್ದವರು. ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಟಲ್ ಅವರ ಪರಮಾಪ್ತರು.ಭೂಪೇಂದ್ರ್ ಯಾದವ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಪ್ತರು. ರಾಜಸ್ಥಾನದ ಮೂಲದ ಈ ಇಬ್ಬರೂ ನಾಯಕರು ಗುಜರಾತ್ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದ್ದರಿಂದ, ಫಲಿತಾಂಶ ಪಕ್ಕದ ರಾಜ್ಯದ ಮೇಲೆಯೂ ಪ್ರಭಾವ ಬೀರಲಿದೆ.

Gujarat election results are going to affect the political developments of other states , specially the neighboring state Rajastan.