ಬಿಗ್ ಬಾಸ್ ಕನ್ನಡ ಸೀಸನ್ 5 : ಈ ವಾರದ ಬೆಸ್ಟ್ ಜೋಡಿ ಹಾಗು ಕಳಪೆ ಜೋಡಿ? | Filmibeat Kannada

2017-12-16 616

ಪ್ರತಿವಾರದ ಅಂತ್ಯದಲ್ಲಿ ನಾಮಿನೇಷನ್ ಗಿಂತ ಕಳಪೆ ಪರ್ಫಾಮರ್ ಯಾರು ಮತ್ತು ಬೆಸ್ಟ್ ಪರ್ಫಾಮರ್ ಯಾರು ಎಂದು ನಿರ್ಣಯ ತೆಗೆದುಕೊಳ್ಳುವುದೇ ದೊಡ್ಡ ಟಾಸ್ಕ್ ಆಗಿದೆ. ಯಾಕಂದ್ರೆ, ಈ ಹಿಂದಿನ ವಾರಗಳಲ್ಲಿ ಈ ನಿರ್ಧಾರದಿಂದ ಮನೆಯಲ್ಲಿ ಮತ್ತು ಮನೆ ಹೊರಗೆ ದೊಡ್ಡ ದೊಡ್ಡ ಚರ್ಚೆಗಳು ಆಗಿವೆ. ಹೀಗಾಗಿ ಈ ವಾರವೂ ಆ ಕುತೂಹಲ ಹಾಗೆ ಇದೆ. ಅಂದ್ಹಾಗೆ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಜೋಡಿ ಟಾಸ್ಕ್ ನೀಡಲಾಗಿತ್ತು. ಅದರ ಅನುಸಾರ ಇಬ್ಬಿಬ್ಬರು ಸ್ಪರ್ಧಿಗಳು ಕೈಯಲ್ಲಿ ಕೋಳ ಹಾಕ್ಕೊಂಡು ಆಟವಾಡಬೇಕಿತ್ತು. ಈ ಟಾಸ್ಕ್ ನಿನ್ನೆಗೆ (ಡಿಸೆಂಬರ್ 15) ಅಂತ್ಯವಾಗಿದ್ದು, ಮನೆ ಕ್ಯಾಪ್ಟನ್ ಆಯ್ಕೆಯ ಪ್ರಕಾರ ಈ ವಾರದ ಕಳಪೆ ಬೋರ್ಡ್ ಮತ್ತು ಬೆಸ್ಟ್ ಪರ್ಫಾಮರ್ ನೀಡಲಾಯಿತು.ಹಾಗಿದ್ರೆ, ಈ ವಾರ ಕಳಪೆ ಬೋರ್ಡ್ ಪಡೆದುಕೊಂಡ ಜೋಡಿ ಯಾರು? ಬೆಸ್ಟ್ ಪರ್ಫಾಮರ್ ನೀಡಿದ ಜೋಡಿ ಯಾರು?