ಬಿಗ್ ಬಾಸ್ ಕನ್ನಡ ಸೀಸನ್ 5 : ಜಯಾಶ್ರೀನಿವಾಸನ್ ಅಂದುಕೊಂಡಂತೆ ಆಯ್ತು? | Filmibeat Kannada

2017-12-14 1

Bigg Boss Kannada 5: Week 9: Jaya Srinivasan predicts about wild card entry & it becomes true?


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ, 'ದೊಡ್ಮನೆ'ಯೊಳಗೆ ಮೊದಲು ಕಾಲಿಟ್ಟವರು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡುತ್ತಿದ್ದಂತೆಯೇ, ಕನ್ಫೆಶನ್ ರೂಮ್ ಸೇರಿದ ಜಯಶ್ರೀನಿವಾಸನ್, ಮಿಕ್ಕೆಲ್ಲಾ ಸ್ಪರ್ಧಿಗಳ ಎಂಟ್ರಿಯನ್ನ ಅಲ್ಲಿಂದಲೇ ವೀಕ್ಷಿಸಿದರು.ಹಾಗೆ, ಸ್ಪರ್ಧಿಗಳು ಒಬ್ಬೊಬ್ಬರೇ 'ಬಿಗ್' ಮನೆಯೊಳಗೆ ಕಾಲಿಡುತ್ತಿದ್ದಾಗ ಜಯಶ್ರೀನಿವಾಸನ್ ಉದ್ಗಾರ ಮಾಡುತ್ತಿದ್ದ ಮಾತು 'ನಾನ್ ಅಂದ್ಕೊಂಡೆ'.!ಅವತ್ತು ಜಯಶ್ರೀನಿವಾಸನ್ ಏನ್ ಅಂದುಕೊಂಡಿದ್ರೋ, ಬಿಟ್ಟಿದ್ರೋ... ಆದ್ರೆ, ನಿನ್ನೆ ಜಯಶ್ರೀನಿವಾಸನ್ ಅಂದುಕೊಂಡ ಹಾಗೇ ನಡೆದಿದೆ. ''ಬಿಗ್ ಬಾಸ್' ಮನೆಗೆ ಹದಿನೆಂಟು ನಂಬರ್ ಲಕ್ಕಿ ಅಲ್ಲ. ಇನ್ನೊಬ್ಬ ಸ್ಪರ್ಧಿ ಬೇಕು'' ಅಂತ ಜಯಶ್ರೀನಿವಾಸನ್ ಲೆಕ್ಕಾಚಾರ ಮಾಡುತ್ತಿರುವಾಗಲೇ, ಹತ್ತೊಂಬತ್ತನೆಯ ಸ್ಪರ್ಧಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ದಿನ 'ಬಿಗ್' ಮನೆಗೆ ಕಾಲಿಟ್ಟ ಸ್ಪರ್ಧಿಗಳ ಸಂಖ್ಯೆ 17.ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿ ವೈಷ್ಣವಿ ಬಂದ್ರು. ಆದ್ರೆ, ಆಟದಲ್ಲಿ ಆಕೆಯ ಬೆನ್ನಿಗೆ ಪೆಟ್ಟು ಬಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಗೇಟ್ ಪಾಸ್ ಪಡೆದರು.