Minister U T Khader speaks about the Honnavar issue exclusively with OneIndia

2017-12-14 436

ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಶಾಂತಿ, ಕರ್ನಾಟಕದಲ್ಲಿ ಚುನಾವಣಾ ವರ್ಷ, ಗುಜರಾತ್ ಚುನಾವಣಾ ಫಲಿತಾಂಶ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದ ಪ್ರಭಾವಿ ಸಚಿವ, ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆಯ ಇನ್ಚಾರ್ಜ್ ಯು ಟಿ ಖಾದರ್ ಜೊತೆಗಿನ ಸಂದರ್ಶನದ ಆಯ್ದ ಭಾಗ. ಸಂದರ್ಶನದ ಉದ್ದಕ್ಕೂ ತಮ್ಮ ಸರಕಾರದ ಸಾಧನೆ, ಬಿಜೆಪಿಯ ಮತಬ್ಯಾಂಕ್ ರಾಜಕಾರಣ, ಆಹಾರ ಇಲಾಖೆಯನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸಚಿವ ಖಾದರ್ ವಿವರಿಸಿದ್ದಾರೆ. ಈ ನಡುವೆ ಖಾದರ್ ಅವರು ಒನ್ ಇಂಡಿಯಾ ಬಳಿ "ಮತ್ತೆ ನಾವೇ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮದು ಜನಪರ ಸರ್ಕಾರ, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ. ಇದೇ ಸಾಕು, ನಾವು ಮತ್ತೆ ಅಧಿಕಾರಕ್ಕೆ ಬರಲು. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮಕ್ಕಳಿಗೆ ಯೂನಿಫಾರಂ ಮುಂತಾದ ಜನಪ್ರಿಯ ಯೋಜನೆಗಳು ನಮ್ಮ ಬೆನ್ನಿಗಿವೆ".

Minister U T Khader spoke about the elections in Gujarat and the achievements of congress government in Karnataka .