ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಮದುವೆ ಇಟಲಿಯಲ್ಲಿ ? | Oneindia Kannada

2017-12-07 295

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರ ಮದುವೆ ಡಿಸೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ನಡೆಯಲಿದೆ ಎಂದು ಹತ್ತು ಹಲವು ಮಾಧ್ಯಮಗಳಲ್ಲಿ ಸಂಜೆಯಿಂದ ಸುದ್ದಿ ಗಿರಕಿ ಹೊಡೆಯುತ್ತಲೇ ಇದೆ. ಈ ಸುದ್ದಿಯೆಲ್ಲ ಶುದ್ಧ ಸುಳ್ಳು ಎಂದು ನಟಿ ಅನುಷ್ಕಾ ಅವರ ವಕ್ತಾರರು ತಿಳಿಸಿದ್ದಾರೆ. ಆದರೆ, ಸುದ್ದಿ ಹಬ್ಬುವುದನ್ನು ತಪ್ಪಿಸಲು ಆಗುತ್ತಿಲ್ಲ. ಬಹುಶಃ ಈ ಹಿಂದೆ ಗಾಳಿಸುದ್ದಿಗೆ ಸ್ವತಃ ಕೊಹ್ಲಿ ಅವರು ಗುದ್ದು ಕೊಟ್ಟಂತೆ ಈ ಸುದ್ದಿಯನ್ನು ಅಲ್ಲಗೆಳೆಯುವ ತನಕ ಈ ಸುಳ್ಸುದ್ದಿ ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೆನಿಸುತ್ತದೆ. ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ -20 ಸರಣಿಯಿಂದ ಕೊಹ್ಲಿ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ, ಇದರರ್ಥ ಅವರು ಮದುವೆ ತಯಾರಿಯಲ್ಲಿದ್ದಾರೆ ಎಂಬುದಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ.

Virushka fans are curious when stories of a big fat Italian wedding for the couple next week began doing the rounds.

Videos similaires