'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಏಳು ವಾರಗಳು ಮುಗಿದು, ಎಂಟನೇ ವಾರ ಆರಂಭವಾಗಿದೆ. ವಾರದಿಂದ ವಾರಕ್ಕೆ ಒಬ್ಬೊಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಿರುವಾಗಲೇ, 'ಬಿಗ್ ಬಾಸ್' ಮನೆಯೊಳಗೆ ಹೊಸ ಸ್ಪರ್ಧಿ ಕಾಲಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಐವತ್ತು ದಿನ ಪೂರೈಸಿ, ಅರ್ಧ ಆಟ ಮುಗಿಸಿರುವ ಹನ್ನೆರಡು ಸ್ಪರ್ಧಿಗಳ ಮಧ್ಯೆ ಹೊಸ ಸ್ಪರ್ಧಿ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗಿದೆ. ಸ್ಯಾಂಡಲ್ ವುಡ್ ನ ನಟಿಯೊಬ್ಬರು 'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರಂತೆ.ಸದ್ಯ 'ಬಿಗ್ ಬಾಸ್' ಮನೆ ಸೇರಿರುವ ನವನಟಿ ಈಕೆಯೇ.. ಇವರ ಹೆಸರು ವೈಷ್ಣವಿ ಚಂದ್ರನ್ ಮೆನನ್.'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಜೇತ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ 'ದೇವ್ರಂಥ ಮನುಷ್ಯ' ಚಿತ್ರದ ನಾಯಕಿ ಈ ವೈಷ್ಣವಿ ಚಂದ್ರನ್ ಮೆನನ್.'ಬಿಗ್ ಬಾಸ್' ಮನೆಯೊಳಗೆ ವೈಷ್ಣವಿ ಚಂದ್ರನ್ ಮೆನನ್ ಇರುವ ಫೋಟೋ ಸದ್ಯ ಕಲರ್ಸ್ ಸೂಪರ್ ಫೇಸ್ ಬುಕ್ ಪುಟದಿಂದಲೇ ಬಹಿರಂಗವಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ವೈಷ್ಣವಿ ಎಂಟ್ರಿಕೊಟ್ಟಿದ್ದಾರೋ, ಅಥವಾ ಇದರಲ್ಲಿ ಬೇರೇನಾದ್ರೂ ಟ್ವಿಸ್ಟ್ ಇದ್ಯೋ ಅಂತ ಇವತ್ತಿನ ಸಂಚಿಕೆಯಲ್ಲಿ ನೋಡ್ಬೇಕು.
Bigg Boss Kannada 5: Week 8: big boss is one of the big reality show in colors kannada.there kannada Actress Vaishnavi Chandran Menon to enter Bigg Boss House as Wild Card Contestant.? she is acted in devrantha manushya movie with bigboss winner pratham