ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್... ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಫ್ಯಾನ್ ಫಾಲೋವರ್ಸ್ ಹೊಂದಿರುವ ನಾಯಕ ನಟ. ಅಭಿಮಾನಿಗಳೆಂದರೆ ಪ್ರೀತಿ ತೋರುವ ಅಪ್ಪು ಅಭಿಮಾನಿಯ ಭೇಟಿಗಾಗಿ ಹೊಸಪೇಟೆಯ ವರೆಗೂ ಹೋಗಿದ್ದಾರೆ. ವರ್ಷಕ್ಕೊಮ್ಮೆ ಮನೆಯ ಬಳಿ ಬಂದು ತನ್ನ ನೆಚ್ಚಿನ ಸ್ಟಾರ್ ಗಾಗಿ ಕಾಯುವ ಅಭಿಮಾನಿಯ ಭೇಟಿ ನೀಡಿ ಮನೆಯವರಿಗೆಲ್ಲ ಸರ್ಪೈಸ್ ನೀಡಿದ್ದಾರೆ. ಮೊನ್ನೆಯಷ್ಟೇ ಸಂತೋಷ್ ಆನಂದ್ ರಾಮ್ ಹಾಗೂ ಸುರಭಿ ನಿಶ್ಚಿತಾರ್ಥಕ್ಕಾಗಿ ಬಳ್ಳಾರಿಗೆ ತೆರಳಿದ್ದ ಅಪ್ಪು ಹೊಸಪೇಟೆಯಲ್ಲಿದ್ದ ತನ್ನ ನೆಚ್ಚಿನ ಫ್ಯಾನ್ ಮನೆಗೆ ಹೋಗಿದ್ದಾರೆ. ಸಾಕಷ್ಟು ಅಭಿಮಾನಿಗಳಿದ್ದರೂ ಅಪ್ಪು ಹೊಸಪೇಟೆಯ ಈ ಅಭಿಮಾನಿಯ ಮನೆಗೆ ಹೋಗಲು ಕಾರಣವೇನು? ಆ ಅಭಿಮಾನಿ ಯಾರು? ಮುಂದೆ ಓದಿಪುನೀತ್ ಇತ್ತೀಚಿಗೆ ಭೇಟಿ ನೀಡಿದ ಅಭಿಮಾನಿಯ ಹೆಸರು ವಿಶ್ವ. ಸಾಕಷ್ಟು ವರ್ಷಗಳಿಂದ ಪುನೀತ್ ಅಭಿಮಾನಿಯಾಗಿರುವ ವಿಶ್ವ ಅಪ್ಪು ಅವ್ರನ್ನ ಮನೆಗೆ ಬರುವಂತೆ ಸಾಕಷ್ಟು ಹಿಂದೆಯೇ ಮನವಿ ಮಾಡಿದ್ರು. ಆ ಕೋರಿಕೆ ಇಂದು ಈಡೇರಿದೆ.ಮೂರು ವರ್ಷದ ಹಿಂದೆ ಹೊಸಪೇಟೆಯ ವಿಶ್ವ ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಟಗರನ್ನ ಉಡುಗೊರೆಯಾಗಿ ನೀಡಿದ್ರು. ಅದಷ್ಟೇ ಅಲ್ಲದೆ ರಣವಿಕ್ರಮ ಸಿನಿಮಾದಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿದ್ರು. ವಿಶ್ವ ಹಾಗೂ ಇಡೀ ಕುಟುಂಬ ಡಾ ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳು.
smiling face puneeth rajkumar always giving us a best commercial family entertainment movie, Puneeth Rajkumar visits his fan vishwa's house at Hospet..watch this video