Big Boss Kannada Season 5 : ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ 'ಬೊಂಬೆ' ನಿವೇದಿತಾ ಗೌಡ

2017-11-21 634

ಬಹುಶಃ ಎಲ್ಲರಿಗೂ ಒಂದು ಕಾಲ ಬರುತ್ತೆ ಅನ್ನೋದು ಇದಕ್ಕೆ ಇರಬೇಕು..! ಇಷ್ಟು ದಿನ ಮೈಸೂರಿನ ನಿವೇದಿತಾ ಗೌಡರನ್ನ ಸ್ಪರ್ಧಿ ಅಂತಲೇ ಪರಿಗಣಿಸದೆ ಬಾಲಿಶವಾಗಿ ನೋಡುತ್ತಿದ್ದವರಿಗೆಲ್ಲ ಇದೀಗ ಅದೇ ನಿವೇದಿತಾ ಗೌಡ ತಿರುಗೇಟು ನೀಡಿದ್ದಾರೆ. 'ಸಾಮಾನ್ಯ ಜ್ಞಾನ'ದ ಟಾಸ್ಕ್ ನಲ್ಲಿ ಪಟ ಪಟ ಅಂತ ಸರಿ ಉತ್ತರಗಳನ್ನು ನೀಡಿದ ನಿವೇದಿತಾ ಗೌಡ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ನಿವೇದಿತಾ ಗೌಡ ಯಾವುದೇ ಕೆಲಸ ಮಾಡಲ್ಲ ಎಂದು ದೂಷಿಸಿ, ಆಕೆಯನ್ನ ಕಳೆದ ವಾರವಷ್ಟೇ ಸೆಲೆಬ್ರಿಟಿ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದರು. ಆದ್ರೀಗ, ಅದೇ ನಿವೇದಿತಾ ಗೌಡ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 'ಕ್ಯಾಪ್ಟನ್' ಆಗಿದ್ದಾರೆ. ಮುಂದೆ ಓದಿರಿ...ಈ ವಾರದ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಒಂದು ಚಟುವಟಿಕೆ ನೀಡಿದ್ದರು. ಇದರ ಅನುಸಾರ 'ಬಿಗ್ ಬಾಸ್', ಮನೆಯ ಎಲ್ಲ ಸದಸ್ಯರಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಎರಡು ತಪ್ಪು ಉತ್ತರಗಳನ್ನು ನೀಡಿದ ಸದಸ್ಯರು ಕ್ಯಾಪ್ಟನ್ ರೇಸ್ ನಿಂದ ಹೊರ ಬಿದ್ದರು. ಅತಿ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿದ ನಿವೇದಿತಾ ಗೌಡ, 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದರು.

Bigg Boss Kannada 5: Week 6: Nivedita Gowda has gave the right answer in the 'General Knowledge Task',she was selected as the 'Big Boss' home captain in this week.

Videos similaires