Bigg Boss Kannada Season 5 : ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಮಾಡಿದ ಕನ್ನಡದ ಖ್ಯಾತ ನಟಿ

2017-11-20 674

'ಬಿಗ್ ಬಾಸ್' ರನ್ನ ಪ್ರಶ್ನೆ ಮಾಡಿದ ಕನ್ನಡದ ಖ್ಯಾತ ನಟಿ. ಕನ್ನಡದ 'ರಿಯಾಲಿಟಿ ಶೋ'ಗಳಲ್ಲಿ ಸಖತ್ ಪಾಪ್ಯೂಲರ್ ಆಗಿರುವ ಶೋ ಅಂದ್ರೆ ಅದು 'ಬಿಗ್ ಬಾಸ್'. ಕಿಚ್ಚನ ನಿರೂಪಣೆ, ವಿಭಿನ್ನ ಎನಿಸುವ ಟಾಸ್ಕ್, ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಬಿಗ್ ಬಾಸ್' ಶೋ ಬಗ್ಗೆ ಕನ್ನಡದ 'ಖ್ಯಾತ ನಟಿ'ಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಲಕ್ಷಾಂತರ ಜನ ನೋಡುವ ಈ ಶೋ ಬಗ್ಗೆ ಇಲ್ಲಿಯ ತನಕ ಯಾರನ್ನೂ ಕಾಡದ ಪ್ರಶ್ನೆ ಈ ನಟಿಗೆ ಬಂದಿದೆ. ಹಾಗಾದ್ರೆ ಆ ಪ್ರಶ್ನೆ ಏನು? ಐದು ಸೀಸನ್ ಆದ ನಂತರ ಈ ಪ್ರಶ್ನೆ ಕೇಳಿರುವ ಆ ನಟಿ ಯಾರು.? 'ನಮ್ ಏರಿಯಾದಲ್ಲಿ ಒಂದ್ ದಿನ', 'ಚಾರ್ ಮಿನಾರ್', 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'.... ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ 'ಮೇಘನಾ ಗಾಂವ್ಕರ್' 'ಬಿಗ್ ಬಾಸ್' ಗೆ ಪ್ರಶ್ನೆ ಕೇಳಿದ್ದಾರೆ. ''ಬಿಗ್ ಬಾಸ್ ಧ್ವನಿ ಯಾಕೆ ಪುರುಷರದ್ದೇ ಆಗಬೇಕು? ಮಹಿಳೆಯ ಧ್ವನಿ ಕೂಡ ಆಗಬಹುದಲ್ಲವೇ.?'' ಅಂತ ಮೇಘನಾ ಕೇಳ್ತಿದ್ದಾರೆ.