ಟಾಲಿವುಡ್ ನ ಬ್ಯೂಟಿ ಕ್ವೀನ್ ಸಮಂತಾ, ನಟ ನಾಗಚೈತನ್ಯ ಜೊತೆ ಸಪ್ತಪದಿ ತುಳಿದು ಕೆಲವೇ ದಿನಗಳಾಗಿದೆ ಅಷ್ಟೆ. ಒಂದು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಕೊಂಡ ನಂತರ ಹನಿಮೂನ್ ಮುಗಿಸಿ ಬಂದಿರುವ ಸಮಂತಾ ಹಾಗೂ ನಾಗಚೈತನ್ಯ ರ ಅದ್ಧೂರಿ ಆರತಕ್ಷತೆ ಕೂಡ ಮೊನ್ನೆ ಮೊನ್ನೆಯಷ್ಟೇ ನಡೆದಿದೆ.ಮದುವೆ ಆದ ನಲವತ್ತು ದಿನಗಳಲ್ಲಿ ಸಮಂತಾ ಗೆ ಮತ್ತೊಬ್ಬರ ಮೇಲೆ ಲವ್ ಆಗಿದ್ಯಂತೆ. ಅಯ್ಯೋ ಮದುವೆ ಆಗಿ ಒಂದೇ ತಿಂಗಳಿಗೆ ಮತ್ತೊಂದು ಲವ್ವಾ..? ಅಂತ ಆಶ್ಚರ್ಯ ಪಡಬೇಡಿ. ಮುಂದೆ ಓದಿ....ಮದುವೆ ಸಂಭ್ರಮ ಮುಗಿಸಿ ನಂತರ ಜಾಲಿಯಾಗಿ ಹನಿಮೂಲ್ ಹೋಗಿ ಬಂದ ಸ್ಯಾಮ್ ಮತ್ತು ನಾಗ್ ಇಬ್ಬರೂ ಈಗ ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಸದ್ಯ ತಮ್ಮ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಸೆಟ್ ಗೆ ಬಂದ ಅಪರೂಪದ ಅತಿಥಿ ಮೇಲೆ ಸ್ಯಾಮ್ ಗೆ ಲವ್ ಆಗಿದೆ. ಸೆಟ್ ನಲ್ಲಿದ್ದ ಪರ್ಷಿಯನ್ ಕ್ಯಾಟ್ ನೋಡಿ ಸಮಂತಾ ಲವ್ ನಲ್ಲಿ ಬಿದ್ದಿದ್ದಾರೆ.ಮದುವೆ, ಪಾರ್ಟಿ ಎಲ್ಲವನ್ನೂ ಮುಗಿಸಿದ ನಂತ್ರ ನಟಿ ಸಮಂತಾ ಇರುಂಬುತಿರೈ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣದ ವೇಳೆ ಸೆಟ್ ನಲ್ಲಿದ್ದ ಪರ್ಷಿಯನ್ ಬೆಕ್ಕು ಸಮಂತಾರನ್ನ ಸಖತ್ ಇಂಪ್ರೇಸ್ ಮಾಡಿದೆ. ಅದರ ಮೇಲೆ ಪ್ರೀತಿಯಾಗಿರುವುದಾಗಿ ಸ್ಯಾಮ್ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.