Karnataka government proposed amendments to the Karnataka Private Medical Establishments Act, 2017, will Siddaramaiah government in Karnataka act on Private Education Institutions and fee structures of private school/colleges too?
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ತೊಡಿಸಲು ಸರಕಾರ ಮುಂದಾಗಲಿ. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಗೊಂಡು ಜನಸಾಮಾನ್ಯರ ಬದುಕು ಹೈರಾಣಗೊಂಡು ಹಲವು ವರ್ಷಗಳೇ ಕಳೆದವು, ನಮ್ಮ ಕಾಲದಲ್ಲಿ ಎಸೆಸೆಲ್ಸಿ ವರೆಗಿನ ಒಟ್ಟಾರೆ ಶಿಕ್ಷಣದ ಖರ್ಚು, ಈಗಿನ ಮಕ್ಕಳ ಯುನಿಫಾರಂಗೂ ಸಾಲುವುದಿಲ್ಲ ಎನ್ನುವುದು ವಸ್ತುಸ್ಥಿತಿ. ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸರಕಾರ ಏನು ಮಸೂದೆ ಮಂಡಿಸಲು ಮುಂದಾಗಿದೆಯೋ, ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದರೆ ಭಪ್ಪರೇ ಮಗನೇ ಅನ್ನಬಹುದಿತ್ತು. ಆದರೆ, ಅದು ಅಷ್ಟು ಸುಲಭ ಮಾತಲ್ಲ. ಎಲ್ಲಾ ಅಡೆತಡೆಯ ಹೊರತಾಗಿಯೂ, ಸಿದ್ದಾರಾಮಯ್ಯ ಈ ಮಸೂದೆ ಜಾರಿಗೆ ತಂದಿದ್ದೇ ಆದಲ್ಲಿ, ಮುಂದಿನ ಚುನಾವಣೆ ಗೆಲ್ಲಲು ಇದೇ ಅವರಿಗೆ ಟ್ರಂಪ್ ಕಾರ್ಡ್.ಅಸಲಿಗೆ, ಸಿದ್ದರಾಮಯ್ಯ ಸರಕಾರ ಏನು 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ' ಮಂಡಿಸಲು ಮುಂದಾಗಿದೆಯೋ, ಅದಕ್ಕೆ ಸ್ವಪಕ್ಷೀಯರದ್ದೇ ಸಂಪೂರ್ಣ ಸಹಮತವಿಲ್ಲ.