ಕನಸಿನಲ್ಲಿ ಚಿನ್ನದ ಆಭರಣಗಳು ಕಾಣಿಸಿಕೊಂಡರೆ ಇದರ ಸೂಚನೆ? | Oneindia Kannada

2017-11-16 97

Everything that happens around us has a reason behind it. The things that we see in general can be a sign of something that might come your way. So if there are certain things that you see in your dreams, these may have a significance of their own. For example, if you see a snake, it can mean that you might be going to face difficult times ahead. In the same way, each thing that we see has its own significance. Watch video to know what does it mean when you see jewellery in your dream


ಕನಸಿನಲ್ಲಿ ಆಭರಣಗಳನ್ನು ಕಂಡರೆ, ನಿಮ್ಮ ಅದೃಷ್ಟವೇ ಬದಲಾಗಲಿದೆ!! ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಅಗಣಿತ ವಿದ್ಯಮಾನಗಳಿಗೆಲ್ಲಾ ಒಂದು ಕಾರಣವಿದ್ದೇ ಇರುತ್ತದೆ. ಸಾಮಾನ್ಯವಾಗಿ ಕಾಣುವ ನೋಟಗಳಲ್ಲಿಯೂ ಕೆಲವು ವಿಶೇಷ ಸಂಜ್ಞೆಗಳು ನಮಗೆ ಮುಂದೆ ಎದುರಾಗುವ ಸಂದರ್ಭವನ್ನು ಸೂಚಿಸಬಹುದು. ವಿಶೇಷವಾಗಿ ಕನಸಿನಲ್ಲಿ ಕಾಣುವ ಕೆಲವು ವಸ್ತುಗಳು ನಮ್ಮ ಬದುಕಿನಲ್ಲಿ ಎದುರಾಗುವ ಕೆಲವು ಸಂದರ್ಭಗಳ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಿದ್ದಿರಬಹುದು. ಉದಾಹರಣೆಗೆ ಕನಸಿನಲ್ಲಿ ಹಾವನ್ನು ಕಂಡರೆ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಲಿವೆ ಎಂದು ತಿಳಿಯಬಹುದು. ಇದೇ ರೀತಿಯಾಗಿ ಪ್ರತಿ ವಸ್ತುವೂ ಒಂದೊಂದು ವಿಷಯವನ್ನು ಪ್ರತಿನಿಧಿಸುತ್ತದೆ. ಇಂದಿನ ಲೇಖನದಲ್ಲಿ ಕನಸಿನಲ್ಲಿ ಆಭರಣಗಳನ್ನು ಕಂಡರೆ ಇದು ಯಾವ ವಿಷಯವನ್ನು ತಿಳಿಸುತ್ತಿದೆ ಎಂಬುದನ್ನು ನೋಡೋಣ...ಕನಸಿನಲ್ಲಿ ಆಭರಣಗಳನ್ನು ಕಂಡರೆ ಮುಂದಿನ ದಿನಗಳಲ್ಲಿ ಭಾರೀ ಖರ್ಚು ಎದುರಾಗಲಿದೆ ಎಂದು ತಿಳಿಯಬಹುದು. ಆದರೆ ಇದು ಒಳ್ಳೆಯ ಖರ್ಚೇ ಹೊರತು ಬೇರೇನೂ ಅಲ್ಲ. ಉದಾಹರಣೆಗೆ ಕುಟುಂಬದಲ್ಲಿ ವಿವಾಹ, ನಿಮ್ಮ ಮನೆಯವರೆಲ್ಲಾ ಸೇರಿ ಪ್ರವಾಸ ಹೊರಡುವುದು ಇತ್ಯಾದಿ. ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಈ ಖರ್ಚು 'ಸಂತೋಷಕರ' ಕಾರಣಗಳಿಗಾಗಿಯೇ ವ್ಯಯಿಸಲ್ಪಡುತ್ತವೆ. ಅಂದರೆ ಆಭರಣಗಳನ್ನು ಕನಸಿನಲ್ಲಿ ಕಂಡರೆ ಸಂತೋಷದ ದಿನಗಳು ಮುಂದೆ ಕಾದಿವೆ, ಅದಕ್ಕಾಗಿ ಖರ್ಚು ಮಾಡಲು ಹಿಂದೇಟು ಹಾಕಬೇಡಿ ಎಂಬ ಸೂಚನೆಯಾಗಿದೆ.