Karnataka Assembly Elections 2018 : ಸಿದ್ದರಾಮಯ್ಯನವರಿಗೆ ಚಾಲೆಂಜ್ ಹಾಕಿದ ವಿ ಶ್ರೀನಿವಾಸ್ ಪ್ರಸಾದ್

2017-11-16 1,485

"I will not contest 2018 Karnataka assembly elections, but i will definitely defeat chief minister Siddaramaiah in this election" BJP leader V. Srinivasa Prasad told to media today.

"ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ, ಸಿದ್ದರಾಮಯ್ಯರನ್ನು ಸೋಲಿಸದೆ ಬಿಡೋಲ್ಲ!" ಮತ್ತೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಸಂಸ್ಕಾರ ರಹಿತ ಸಿದ್ದರಾಮಯ್ಯನನ್ನು ಸೋಲಿಸುವುದಷ್ಟೆ ನನ್ನ ಮುಖ್ಯ ಉದ್ದೇಶ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸವಾಲ್ ಎಸೆದಿದ್ದಾರೆ.ಅವರ ಅಭಿಮಾನಿಗಳು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸುವ ಉದ್ದೇಶದಿಂದ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ನಾನು ಉಪಚುನಾವಣೆಯಲ್ಲಿ ನನ್ನ ಸ್ವಾಭಿಮಾನವನ್ನು ಪಣಕ್ಕಿಟ್ಟು ಸ್ಪರ್ಧಿಸಿದ್ದೆ. ಆದರೆ ಜನ ಸ್ವಾಭಿಮಾನ ಬೇಡವೆಂದರು. ಹೀಗಾಗಿ ಸೋಲು ಅನುಭವಿಸುವಂತಾಯಿತು. ಆದ್ದರಿಂದ ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.ವಿದ್ಯಾವಂತರೇ ಅಧಿಕವಾಗಿರುವ ಬೂತ್ ನಲ್ಲಿಯೂ ನನಗೆ ಕಡಿಮೆ ಮತ ಬಂದಿತ್ತು, ಕಾರಣ ಅವರು ಕೂಡ ಮತವನ್ನು ಮಾರಿಕೊಂಡಿದ್ದರು. ಇಂತಹ ಮತದಾರರು ಇರುವ ಕ್ಷೇತ್ರದಲ್ಲಿ ನಾನೇಕೆ ಸ್ಪರ್ಧೆ ಮಾಡಬೇಕೆಂಬ ನೋವು ಕಾಡುತ್ತಿದೆ. ನಾನು 24 ಗಂಟೆಗಳ ಕಾಲವೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದು ನೀವು ನಿಲ್ಲಿಸಿದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡುತ್ತೇನೆ ಎಂದರು.

Videos similaires