ವೀರಶೈವ ಬೇರೆ ಲಿಂಗಾಯಿತ ಬೇರೆ ಎಂದು ತೊಡೆತಟ್ಟಿರುವ ನೀರಾವರಿ ಸಚಿವ ಎಂ ಬಿ ಪಾಟೀಲರು, ನಿಯತ್ತಾಗಿ ವೋಟು ಮಾಡುವ ಮತದಾರ ತಮ್ಮ ಚಪ್ಪಲಿಯನ್ನು ತಾವೇ ಹೊಡ್ಕೊಳ್ಳುವಂತಹ ಹೇಳಿಕೆಯನ್ನು ನೀಡಿದ್ದಾರೆ. ವಿಜಯಪುರದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಳವಾರ (ನ 14) ಮಾತನಾಡುತ್ತಿದ್ದ ಸಚಿವ ಎಂ ಬಿ ಪಾಟೀಲ್, ರಾಜಕಾರಣಿಗಳು ಹಾಳಾಗಿದ್ದೇ ಮತದಾರರಿಂದ. ರಾಜಕಾರಣಿಗಳು ಚುನಾವಣೆಯ ವೇಳೆ ಹಣ ಹಂಚುವುದರಿಂದ, ಮತದಾರ ಅದರ ಆಮಿಷಕ್ಕೆ ಬಲಿಯಾಗಿದ್ದಾನೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲಾ ರಾಜಕಾರಣಿಗಳು ಮತದಾರರಿಗೆ ದುಡ್ಡು, ಹೆಂಡದ ಆಮಿಷವೊಡ್ದುತ್ತಿದ್ದಾರೆ. ಇದನ್ನು ಅಂದೇ ಮತದಾರ ಪ್ರತಿಭಟಿಸಿದ್ದರೆ, ರಾಜಕಾರಣಿಗಳು ಹಾಳಾಗುತ್ತಿರಲಿಲ್ಲ ಎಂದು ಸಚಿವ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಾವಣೆ ಅಂದರೆ ಮತದಾರರಿಗೆ ದುಡ್ಡು, ಹೆಂಡ ಎನ್ನುವಂತಾಗಿದೆ. ಎಲ್ಲಿಯವರೆಗೆ ಮತದಾರ ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ರಾಜಕಾರಣಿಗಳೂ ಸುಧಾರಿಸುವುದಿಲ್ಲ ಎಂದು ಪಾಟೀಲರು ಹೇಳಿದ್ದಾರೆ.
M B Patil makes people of Karnataka cringe-worthy by saying that the people are the main reason that politicians are being corrupt today .