ರಾಧಿಕಾ ಮುಂದಿನ ಚಿತ್ರಗಳು ಯಾವುವು ? | Radhika's upcoming projects | Filmibeat Kannada

2017-11-13 1,190

ಇತ್ತೀಚೆಗಷ್ಟೇ 'ಕಾಂಟ್ರಾಕ್ಟ್' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಸಿಕ್ಕಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಎಲ್ಲೂ ಕಣ್ಣಿಗೆ ಬೀಳಲಿಲ್ಲ. ನಿನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಬರ್ತಡೇ ಆಗಿದೆ. ಆದರೂ ಅವರು ಮಾಧ್ಯಮದ ಮುಂದೆ ಬಂದಿಲ್ಲ. ಇನ್ನೇನು ಚುನಾವಣೆ ಬರ್ತಿದೆ, ರಾಜಕೀಯದಲ್ಲಿ ಏನಾದರೂ ಸುದ್ದಿ ಮಾಡ್ತಾರಾ, ಅಂದ್ರೆ ಅಲ್ಲೂ ಇಲ್ಲ...ಹಾಗಾದ್ರೆ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ವಿಡಿಯೋ ನೋಡಿ . ರಾಧಿಕಾ ಕುಮಾರಸ್ವಾಮಿ ಸದ್ಯ ತಮ್ಮ ಬಿಸಿನೆಸ್ ಗಳನ್ನ ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರಂತೆ. ಬೆಂಗಳೂರಿಗಿಂತ ಹೆಚ್ಚಾಗಿ ವಿದೇಶದಲ್ಲೇ ಟೈಂ ಸ್ಪೆಂಡ್ ಮಾಡುತ್ತಿದ್ದಾರಂತೆ. ಉದ್ಯಮದತ್ತ ಚಿತ್ತ ಹರಿಸಿದ ಮಾತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಸಿನಿಮಾರಂಗವನ್ನ ಬಿಟ್ಟಿಲ್ಲ. ರಾಧಿಕಾ ಅಭಿನಯದ 'ಕಾಂಟ್ರೆಕ್ಟ್', 'ರಾಜೇಂದ್ರ ಪೊನ್ನಪ್ಪ' ಚಿತ್ರೀಕರಣದ ಕೊನೆಯ ಹಂತದಲ್ಲಿದೆ.ಬಹಳ ಹಿಂದೆಯೇ ಹೇಳಿದಂತೆ ರಾಧಿಕಾ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಸಿನಿಮಾ ಮಾಡೋದು ಕನ್ಫರ್ಮ್ ಆಗಿದೆ.

upcoming projects of Radhika kumarswamy and the where abouts of her is shown in this video..