Bigg Boss Kannada Season 5 : ಆಟವನ್ನ ಅರ್ಧಕ್ಕೆ ಬಿಟ್ಟು ಹೊರ ನಡೆದ ತೇಜಸ್ವಿನಿ

2017-11-10 1

Bigg Boss Kannada 5: Week 4: Tejaswini walks out of the show. Since Tejaswini father was not well, her mom had requested her to be with them for the support.

'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.! ನಾಲ್ಕು ವಾರಗಳಲ್ಲಿ ಇದೇ ಮೊದಲ ಬಾರಿಗೆ ನಾಮಿನೇಟ್ ಆಗಿದ್ದ ನಟಿ ತೇಜಸ್ವಿನಿ, ಎಲಿಮಿನೇಷನ್ ಪ್ರಕ್ರಿಯೆ ನಡೆಯುವ ಮೊದಲೇ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಾಲಿಟ್ಟಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಆಟವನ್ನ ಅರ್ಧಕ್ಕೆ ನಟಿ ತೇಜಸ್ವಿನಿ ಮೊಟಕುಗೊಳಿಸಿದ್ದಾರೆ. ತಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ತೇಜಸ್ವಿನಿ 'ಬಿಗ್ ಬಾಸ್' ಗೆ ಗುಡ್ ಬೈ ಹೇಳಿದ್ದಾರೆ.ಅನಾರೋಗ್ಯದ ಕಾರಣ ತಂದೆ ಆಸ್ಪತ್ರೆಗೆ ದಾಖಲಾಗಿರುವ ಸಂಗತಿಯನ್ನ 'ಬಿಗ್ ಬಾಸ್' ತೇಜಸ್ವಿನಿಗೆ ತಿಳಿಸಿದರು. ತೇಜಸ್ವಿನಿ ತಂದೆಗೆ ಕಿಡ್ನಿ ಫೇಲ್ಯೂರ್ ಆಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಸಮಯದಲ್ಲಿ ತೇಜಸ್ವಿನಿ ಇರುವಿಕೆಯನ್ನ ಆಕೆಯ ಕುಟುಂಬ ಬಯಸಿದ ಕಾರಣ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ತೇಜಸ್ವಿನಿ ನಿರ್ಧರಿಸಿದರು.'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕುಗೊಳಿಸುವ ಬಗ್ಗೆ ತಮ್ಮ ತಾಯಿ ಜೊತೆ ಮಾತನಾಡಿದ ಬಳಿಕ ತೇಜಸ್ವಿನಿ ನಿರ್ಧರಿಸಿದರು.