ಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಗೌಡ ಹೇಳಿದ್ದೇನು ? | Oneindia Kannada

2017-11-10 3

ಪ್ರಜ್ವಲ್ ರೇವಣ್ಣ ಟಿಕೆಟ್ ನೀಡುವ ಕುರಿತು ಕೆಲವು ದಿನಗಳಿಂದ ಬಿಸಿ-ಬಿಸಿ ಚರ್ಚೆ ಏರ್ಪಟ್ಟಿದ್ದು, ಪ್ರಜ್ವಲ್ ಅವರು ನಿಖಿಲ್ ಅವರ ಸ್ನೇಹಿತ ಮಹಾಭಾರತ ಚಿತ್ರದ ನಿರ್ಮಾಪಕ ಮುನಿರತ್ನ ಅವರ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಹಾಗಾಗಿ ಅವರಿಬ್ಬರ ನಡುವೆ ಮನಸ್ಥಾಪ ಇದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಪ್ರಸ್ತುತ ಮಹಾಭಾರತ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇರುವ ನಿಖಿಲ್ ಗೌಡ ಇನ್ನು ಒಂದು ವಾರದಲ್ಲಿ ಪಕ್ಷದ ಪರ ಸ್ಟಾರ್ ಪ್ರಚಾರಕರಾಗಿ ತೆರಳಲಿದ್ದಾರಂತೆ. ಚುನಾವಣೆ ಮುಗಿಯುವವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ನಮ್ಮ ತಂದೆ ಮುಖ್ಯಮಂತ್ರಿ ಆಗಿದ್ದ 20 ತಿಂಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಗಳಿಗೆ ಅರಿವಿದೆ. ಜನರು ಖಂಡಿತವಾಗಿಯೂ ಕುಮಾರಸ್ವಾಮಿ ಅವರ ಕೈಹಿಡಿಯಲಿದ್ದಾರೆ. ಮತ್ತೆ ಅವರೇ ಮುಖ್ಯಮಂತ್ರಿ ಆಗಿಯೇ ಆಗಲಿದ್ದಾರೆ ಎಂದು ನಿಖಿಲ್ ಗೌಡ ಭರವಸೆಯ ಮಾತನಾಡಿದ್ದಾರೆ.

listen to what does nikhil has to say about prajwal's current political developments.

Videos similaires